ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದರ ಕುರಿತು ಇಲಾಖೆಗೆ ಪ್ರಾಥಮಿಕ ತನಿಖೆಗೆ ಸೂಚಿಸಿದ್ದೇನೆ ವರದಿ ಬಂದಮೇಲೆ ಎಲ್ಲ ವಿಷಯ ಗೊತ್ತಾಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ನಲ್ಲಿ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಲು ನಿರ್ಧಾರ ಮಾಡಿದ್ದು, ಫೆಬ್ರವರಿ ೪ರ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಜೆ ರಾಯ್ ಅವರನ್ನು ಕರೆದಿದ್ದಾರೆ.
ಈ ಹಿನ್ನೆಲೆ ಕಳೆದ ಮೂರು ದಿನಗಳ ಹಿಂದೆ ಸಿಜೆ ರಾಯ್ ದುಬೈ ನಿಂದ ಬೆಂಗಳೂರಿಗೆ ಬಂದಿದ್ದಾರೆ.
ಅಧಿಕಾರಿಗಳು ಅವರ ಆಫೀಸಿಗೆ ಹೋಗಿ ಅವರ ಜೊತೆ ಚರ್ಚೆ ಮಾಡಿ ಸ್ಟೇಟ್ಮೆಂಟ್ ತಗೊಳ್ಳೋದಕ್ಕೆ ನಿರ್ಧರಿಸಿದ್ದಾರೆ. ಈ ವೇಳೆ ೨೦ ನಿಮಿಷ ಬರ್ತೀನಿ ಎಂದು ಚೇಂಬರ್ ಗೆ ತೆರಳಿದ್ದಾರೆ. ಆಗ ಬಾಗಿಲು ಹೊಡೆದು ನುಡಿದಾಗ ಅವರು ಆತ್ಮಹತ್ಯೆ ಮಾಡಿಕೊಡಿರುವುದು ಗಮನಕ್ಕೆ ಬಂದಿದೆ.
ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಪ್ರಾಥಮಿಕ ತನಿಖೆಗೆ ಪರಂ ಸೂಚನೆ



