ಬೆಂಗಳೂರು : ನಾವು ಒಂದು ವರ್ಗಕ್ಕೆ ಕಾನೂನು ಸೀಮಿತ ಮಾಡಲ್ಲ ಯಾರೇ ಇದ್ದರೂ ಕೂಡ ಕಾನೂನು ಎಲ್ಲರಿಗೂ ಒಂದೇ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ೮ ಜನರನ್ನು ಬಂಧಿಸಲಾಗಿದೆ ಸದ್ಯ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಾವು ಕೂಡ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಬಿಜೆಪಿ ನಾಯಕರು ಅದನ್ನೇ ಹೇಳಬೇಕಲ್ಲ ಇನ್ನೇನ್ ಮಾಡೋಕಾಗುತ್ತೆ.
ಆದರೆ ನಮ್ಮ ಉದ್ದೇಶ ಅದಲ್ಲ ಕಾನೂನು ರಕ್ಷಣೆ ಮಾಡುವುದಷ್ಟೇ ನಮ್ಮ ಉದ್ದೇಶವಾಗಿದೆ. ಬಾಗಲಕೋಟೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಯಾರನ್ನು ಕೂಡ ಇಲ್ಲಿ ರಕ್ಷಣೆ ಮಾಡಲ್ಲ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತೆ ಅವರನ್ನು ರಕ್ಷಣೆ ಮಾಡೋದು ಅಥವಾ ಸಹಕಾರ ಮಾಡೋದು ಇಲ್ಲ ಯಾರು ಕಾನೂನನ್ನು ತಮ್ಮ ಕೈಗೆ ಕಾನೂನು ತೆಗೆದುಕೊಳ್ಳುತ್ತಾರೋ ಅಂತವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ದ್ವೇಷ ಭಾಷಣ ವಿಚಾರವಾಗಿ ರಾಜ್ಯಪಾಲರಿಗೆ ವರದಿ ಹೋಗಿ ಅವರು ಸಹಿ ಮಾಡಿದ ನಂತರ ಎಲ್ಲವೂ ತಿಳಿದು ಬರಲಿದೆ. ಅಲ್ಲಿಯವರೆಗೂ ಹಿಂದಿನ ಕಾನೂನುಗಳನ್ನೇ ನಾವು ಉಪಯೋಗ ಮಾಡುತ್ತೇವೆ ಈ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇದೇ ರೀತಿ ಗಲಾಟೆ ಆಗಿತ್ತು ಎಂದಾಗ, ಅದಕ್ಕೆ ಈಗ ಹೊಸ ಕಾನೂನುಗಳನ್ನು ತರಲು ಪ್ರಮುಖ ಕಾರಣವೇ ಅಂತ ಘಟನೆಗಳನ್ನು ತಡೆಯಲು ಎಂದು ತಿಳಿಸಿದರು.
ನಾವು ಒಂದು ವರ್ಗಕ್ಕೆ ಕಾನೂನು ಸೀಮಿತ ಮಾಡಲ್ಲ: ಪರಂ



