ಚಿಕ್ಕಬಳ್ಳಾಪುರ: ಪ್ರತಿಯೊಂದು ಮಗುವಿನಲ್ಲಿ ತನ್ನದೇ ಆದ ಪ್ರತಿಭೆಯು ಅಡಗಿದ್ದು, ಆ ಪ್ರತಿಭೆಯನ್ನು ಹೊರಹಾಕಲು ಸೂಕ್ತವಾದ ಸಮಯ ಮತ್ತು ವೇಧಿಕೆ ಸಹಕಾರಿಯಾಗುತ್ತದೆ. ಅಂತಹ ವೇಧಿಕೆಯಲ್ಲಿ ಪ್ರತಿಯೊಂದು ಮಗು ಭಾಗವಹಿಸಿ ತನ್ನ ಪ್ರತಿಭೆಯನ್ನು ತೋರಿಸಬೇಕು ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಅರುಣಾ ಕುಮಾರಿ ಅವರು ತಿಳಿಸಿದರು.
ನಗರದ ಸರ್.ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಶುಕ್ರವಾರ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಶಾಲಾ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತನ್ನಲ್ಲಿ ಅಡಗಿರುವ ಕೌಶಲ್ಯ, ಸೃಜನಾತ್ಮಕತೆ, ನೈಪುಣ್ಯತೆಯಂತಹ ಗುಣಗಳನ್ನು ಹೊರಹಾಕಲು ಸಾಂಸ್ಕøತಿಕ, ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ ಮುಂತಾದ ಚಟುವಟೆಗಳಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿನ ಪ್ರತಿಭೆಯನ್ನು ಪಾಲಕರು ಹಾಗೂ ಶಿಕ್ಷಕರು ಗುರ್ತಿಸಿ ಪ್ರೋತ್ಸಾಹ ನೀಡಬೇಕು.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು. ಈ ಜಿಲ್ಲೆಯು ಹಲವಾರು ಮಹನೀಯರು, ವಿಜ್ಞಾನಿಗಳು, ಇಂಜಿನಿಯರ್ ಗಳು, ಶಿಕ್ಷಣ ತಜ್ಞರನ್ನು ಕೊಟ್ಟಿದ್ದು, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅನೇಕ ಪ್ರತಿಭಾವಂತರು ಈ ಮಣ್ಣಿನಲ್ಲಿ ಹುಟ್ಟಿದ್ದಾರೆ. ಅಂತಹ ಮಣ್ಣಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಸಾಧನೆ ಮಾಡಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆ ತೋರಿಸಬೇಕು. ನಮ್ಮ ಜಿಲ್ಲೆಯ ಪರಂಪರೆಯನ್ನು ಇಡಿ ಜಗತ್ತಿಗೆ ಸಾರುವಂತಹ ಮಕ್ಕಳು ತಾವೇಲ್ಲರು ಆಗಬೇಕೆಂದು ಮಕ್ಕಳಿಗೆ ಆಶಿರ್ವಾದ ಮಾಡಿದರು..
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಾಮರಾಜೇ ಅರಸ್.ಎ ರವರು ಮಾತನಾಡಿ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ರವರು ಜಿಲ್ಲೆಯಲ್ಲಿ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ಜಿಲ್ಲೆಯ ಪಾರಂಪರಿಕ ಸಂಸ್ಕೃತಿ, ಮಕ್ಕಳ ಸಾಹಿತ್ಯ, ವೈವಿದ್ಯಮಯ, ಕಾವ್ಯಕಥೆ, ನಾಟಕ ಪ್ರದರ್ಶನ, ಜಾನಪದ ಕಲೆ, ಕ್ರೀಡೆ, ಚಿತ್ರಕಲೆ, ಕ್ಲೇಮಾಡೆಲಿಂಗ್ ಹೀಗೆ ವಿವಿಧ ಚಟುವಟಿಕೆಗಳನ್ನು ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದ ಮೂಲಕ ಆಯೋಜಿಸಿದ್ದು, ಈ ಮಕ್ಕಳ ಹಬ್ಬದಲ್ಲಿ 06 ತಾಲ್ಲೂಕಿನ ಆಯ್ದ ಮಕ್ಕಳು ಭಾಗವಹಿಸಿ ತಮ್ಮ ಸೂಪ್ತ ಪ್ರತಿಭೆಯನ್ನು ಹೊರತೆಗೆಯಲು ಸೂಕ್ತ ವೇಧಿಕೆಯಾಗಿದೆ.
ಈ ಮೂಲಕ ಮಕ್ಕಳಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಆಸಕ್ತಿ ಮೂಡಲು ಮಕ್ಕಳ ಹಬ್ಬ ಕಾರ್ಯಕ್ರಮವು ಸಹಕರಿಯಾಗಿದೆ. ಆಗಾಗಿ ಎಲ್ಲಾ ಮಕ್ಕಳು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡ ರವರು ಮಾತನಾಡಿ, ಗ್ರಾಮೀಣ ಮಕ್ಕಳ ಕಲೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯಲು ಇಂತಹ ಕಾರ್ಯಕ್ರಮಗಳು ಸಂತಸ ತರುವಂತಹದಾಗಿವೆ.
ಎಲ್ಲಾ ಮಕ್ಕಳು ಕೀಳರಿಮೆಯನ್ನು ಬಿಟ್ಟು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇಧಿಕೆ ಮಕ್ಕಳ ಪಾಲಿಗೆ ವರವಾಗಿದೆ. ಪ್ರತಿಭೆಯಲ್ಲಿ ಸ್ಪರ್ಧಿಸುವಾಗ ಸೋಲು ಗೆಲುವು ಇದ್ದೇಇರುತ್ತದೆ. ಇದರಿಂದ ಯಾವುದೇ ಮಗುವು ದೈರ್ಯ ಗುಂದಬಾರದು. ಸಂಕಷ್ಟದಲ್ಲಿ ಇರುವಂತಹ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆನ್ನುಲುಬಾಗಿ ನಿಲ್ಲುತ್ತದೆ. ಮಕ್ಕಳಿಗೆ ಏನೇ ತೊಂದರೆ ಬಂದರು ಮಕ್ಕಳ ಸಹಾಯವಾಣಿ ಸಂ: 1098/112 ಗೆ ಸಂಪರ್ಕಿಸಿ ಮಾಹಿತಿ ತಿಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಸರ್.ಎಂ ವಿ ಸ್ಮಾರಕ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಪರಮಶಿವ ಮೂರ್ತಿ, ಮುಖ್ಯೋಪಾಧ್ಯಾಯ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.