ನವದೆಹಲಿ: ಭಾರತದ ಗಾಲ್ಫ್ ತಾರೆಗಳಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಸೋಮವಾರ ವಿಶ್ವ ರ್ಯಾಂಕಿಂಗ್ ಮೂಲಕ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.
ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಕ್ರೀಡಾಕೂಟಕ್ಕಾಗಿ ನಾಲ್ಕು ಮಂದಿಯ ಭಾರತದ ತಂಡದಲ್ಲಿ 24ನೇ ರ್ಯಾಂಕ್ನೊಡನೆ ಕರ್ನಾಟಕದ ಅದಿತಿ ಅರ್ಹತೆ ಪಡೆದರೆ, ದೀಕ್ಷಾ 40ನೇ ರ್ಯಾಂಕ್ನೊಡನೆ ಅವಕಾಶ ಪಡೆದರು. ಪುರುಷರ ವಿಭಾಗದಲ್ಲಿ ಅಗ್ರಮಾನ್ಯ ಗಾಲ್ಫರ್ ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಈಗಾಗಲೇ ಅರ್ಹತೆ ಪಡೆದಿದ್ದಾರೆ. ಅದಿತಿಗೆ ಇದು ಮೂರನೇ ಒಲಿಂಪಿಕ್ಸ್, ದೀಕ್ಷಾ ಎರಡನೇ ಬಾರಿಗೆ ಸ್ಪರ್ಧಿಸಲಿದ್ದಾರೆ.
27 ವರ್ಷ ವಯಸ್ಸಿನ ಶರ್ಮಾ ಮತ್ತು 36 ವರ್ಷ ವಯಸ್ಸಿನ ಭುಲ್ಲರ್ ಅವರಿಗೆ ಇದು ಮೊದಲ ಒಲಿಂಪಿಕ್ಸ್ ಆಗಿದೆ. ಅದಿತಿ ನಂತರ ಎಲ್ಇಟಿ (ಮಹಿಳಾ ಯುರೋಪಿಯನ್ ಟೂರ್) ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ದೀಕ್ಷಾ ಪಾತ್ರರಾಗಿದ್ದಾರೆ. ಅವರು 18ನೇ ವಯಸ್ಸಿಗೆ ಈ ಸಾಧನೆ ಮಾಡಿದ್ದಾರೆ.