ಶಿಡ್ಲಘಟ್ಟ: ನಗರದ ಹೊರವಲಯದ ನಗರಸಭೆ ಪಾರ್ಕ್ ನಲ್ಲಿ ಪೌರಕಾರ್ಮಿಕರಿಂದ ಸ್ವಚ್ಚತೆ ಮಾಡಿಸುವ ಹಾಗೂ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.ಹೊರವಲಯದ ಗೌಡನ ಕೆರೆ ಅಂಗಳದಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿತ್ತು.ಈ ಪಾರ್ಕ್ ಅಪೂರ್ಣ ಸ್ಥಿತಿಯಲ್ಲಿ ಇದ್ದಿದ್ದರಿಂದ ಸಭೆಗಳಲ್ಲಿ ವಾಕ್ಸಮರ ನಡೆದಿತ್ತು. ಶಾಸಕರು ನಗರದ ಸ್ವಚ್ಚತೆಗೆ ಆದ್ಯತೆ ನೀಡಿದ್ದರಿಂದ ಒಂದಷ್ಟು ಸ್ವಚ್ಚತೆ ಮಾಡಲಾಗಿತ್ತು.
ಅಮೃತ್ ಯೋಜನೆಯಲ್ಲಿ ಈ ಪಾರ್ಕ್ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರಾಗಿದೆ.ಆದರೆ ಹಣ ಸಮಯಕ್ಕೆ ಸರಿಯಾಗಿ ಬಿಡುಗಡೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ಸನಿಹದಲ್ಲೇ ಕೊಳಚೆ ನೀರು ಕಾಲುವೆ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ನೀರು ಸಂಗ್ರಹಿಸಿ ಸಸಿಗಳಿಗೆ ನೀರುಣಿಸುವ ಯೋಜನೆ ಇದೆ .
ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ಕುಮಾರ್, ನಗರಸಭೆ ಅಧೀಕ್ಷಕಿ ರಾಜೇಶ್ವರಿ,ಕಿರಿಯ ನೋಡಲ್ ಇಂಜಿನಿಯರ್ ಸುಧಾಕರ್, ಆರೋಗ್ಯ ನಿರೀಕ್ಷಕರಾದ ಮುಕ್ತಾಂಭ,ಜಿಲ್ಲಾ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣರಾಜು, ಪೌರಕಾರ್ಮಿಕರ ಸಂಘದ ಅಧ್ಯಕ್ಷ, ಮುಖಂಡರು, ಪಾಲ್ಗೊಂಡಿದ್ದರು.