ದೆಹಲಿ: 18ನೇ ಲೋಕಸಭೆಯ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಇಂದು ಬೆಳಿಗ್ಗೆ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ತದನಂತರ ಅವರು ಲೋಕಸಭೆ ಯಲ್ಲಿ ನೂತನ ಸಂಸದರಿಗೆ ಪ್ರಮಾಣ ವಚನ ಭೋದಿಸಿದರು. ಮೊದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದ ಸಂಸದರಾಗಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.ತದನಂತರ ಲಕ್ನೋ ಕ್ಷೇತ್ರದ ಸಂಸದರಾಗಿ ರಾಜನಾಥ್ ಸಿಂಗ್ ಗಾಂಧಿನಗರ ಕ್ಷೇತ್ರದ ಸಂಸದರಾಗಿ ಅಮಿತ್ ಶಾ, ನಾಗ್ಪುರ ಕ್ಷೇತ್ರದ ಸಂಸದರಾಗಿ ನಿತಿನ್ ಗಡ್ಕರಿ, ಮಂಡ್ಯ ಕ್ಷೇತ್ರದ ಸಂಸದರಾಗಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮೋದಿ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇಂದು 280 ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ 264 ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದು, ಎಲ್ಲಾ ಸದಸ್ಯರ ಪ್ರಮಾಣ ವಚನದ ನಂತರ ನೂತನ ಸ್ಫೀಕರ್ ಆಯ್ಕೆ ನಡೆಯಲಿದೆ.