ಬೊಮ್ಮನಹಳ್ಳಿ: ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಸೌಮ್ಯರೆಡ್ಡಿ ಗೆಲುವಿಗಾಗಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಸಜ್ಜಾಗಿದೆ ಎಂದು ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡರಾದ ಉಮಾಪತಿ ಶ್ರೀನಿವಾಸ್ ಗೌಡ ತಿಳಿಸಿದರು.
ಅವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋ ಜಿತ ಸಂಸದೀಯ ಅಭ್ಯರ್ಥಿ ಸೌಮ್ಯರೆಡ್ಡಿ ಕಾಂಗ್ರೆಸ್
ಮುಖಂಡರುಗಳ ಮನೆ ಮನೆಗೆ ಬೇಟಿ ಸಮಾ ಲೋಚನೆಯಲ್ಲಿ ಭಾಗವಹಿಸಿ ಮಾತನಾಡಿದರು.ಸೌಮ್ಯ ರೆಡ್ಡಿ ಅವರು ತಂದೆ ರಾಮಲಿಂಗಾರೆಡ್ಡಿ ಅವರಂತೆ ಸರಳ ಮತ್ತು ಸೌಮ್ಯತೆಯನ್ನ ಹೊಂದಿದ್ದು ಬಡವರು ಹಾಗೂ ಹಿಂದುಳಿದ ವರ್ಗದ ಜನರ ಕಷ್ಟ ಸುಖಗಳಿಗೆ ಸದಾ ನಿಲ್ಲುತ್ತಾರೆ,
ಯಾವುದೇ ಸಮಯದಲ್ಲಿ ಫೋನ್ ಮಾಡಿದರು ಮನೆಯ ಮಗಳಂತೆ ಬಂದು ನೆರವಾಗುತ್ತಾರೆ ಇಂತಹ ಕ್ರಿಯಾಶೀಲ ಮತ್ತು ಪ್ರಭುದ್ದ ವ್ಯಕ್ತಿತ್ವದ ಯುವ ರಾಜಕಾರಣಿ ನಮ್ಮ ಕ್ಷೇತ್ರಕ್ಕೆ ಅವಶ್ಯಕವಾಗಿದೆ ಆದುದ್ದರಿಂದ ಈಬಾರಿ ಇವರು ನಮ್ಮ ಸಂಸದೀಯ ಅಭ್ಯರ್ಥಿ ಆಗಿ ಸ್ಪರ್ಧಿಸುತ್ತಿರುವುದು ನಮ್ಮ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಉತ್ಸಹ ಮತ್ತು ಶಕ್ತಿ ಬಂದಿದ್ದು ಇಡೀ ಕ್ಷೇತ್ರದ ಕಾರ್ಯಕರ್ತರು ಸೈನಿಕ ರಂತೆ ಸಜ್ಜಾಗಿ ನಿಂತಿದ್ದಾರೆ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಜಿತ ಸಂಸದೀಯ ಅಭ್ಯರ್ಥಿ ಯಾದ ಸೌಮ್ಯ ರೆಡ್ಡಿ ಮಾತನಾಡಿ ನಾನು ನಮ್ಮ ತಂದೆಯಂತೆ ರಾಜಕೀಯದಲ್ಲಿ ಜನರ ಸೇವೆ ಮಾಡಬೇಕು ಎಂಬುದಕ್ಕೆ ನಮ್ಮ ಸ್ನೇಹಿತರು ಹಾಗೂ ಹಿತೈಷಿಗಳು ಒತ್ತಾಸೆಯಿಂದಾಗಿ ರಾಜಕೀಯ ಪ್ರವೇಶ ಮಾಡಿದೆ ಕಳೆದ ಬಾರಿ ನಾನು ಶಾಸಕಿಯಾಗಿ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿದ ಸಂತೃಪ್ತಿ ನನಗೆ ಇದೆ ಕೇಂದ್ರದಲ್ಲಿ ಹೊಸಬದಲಾವಣೆ ತಂದು ಹೊಸ ಕ್ರಾಂತಿಯ ಹಾಗೂ ಶಾಂತಿಯ ಸರ್ಕಾರವನ್ನು ನೀಡಬೇಕು ಎಂಬ ಆಕಾಂಕ್ಷೆಯಿಂದ ಈ ಕ್ಷೇತ್ರದಲ್ಲಿ ಸಂಸದೀಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಿನಿ ನಿಮ್ಮೆಲ್ಲ ಪ್ರೀತಿ ವಿಶ್ವಾಸವೇ ನನ್ನ ಗೆಲುವು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯರಾದ ಕೆ.ವಾಸುದೇವಾರೆಡ್ಡಿ, ಹೆಚ್.ಎಸ್.ಆರ್.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವ ರೆಡ್ಡಿ, ಬೊಮ್ಮನಹಳ್ಳಿ ಬ್ಲಾಕ್ ಅಧ್ಯಕ್ಷ ರವೀಂದ್ರಗೌಡ, ಬಿಳೇಕಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ ನಾರಾಯಣಸ್ವಾಮಿ, ಬಿಬಿಎಂಪಿ ಸದಸ್ಯರಾದ ಶೋಭಾ ಜಗದೀಶ್ ಗೌಡ, ಕಾಂಗ್ರೆಸ್ ಮುಖಂಡರಾದ ಎಬಿಡಬ್ಲ್ಯೂ ನಾಗರಾಜ್, ರಾಘವೇಂದ್ರ, ಜರಗನಹಳ್ಳಿ ಉಮೇಶ್ ಗೌಡ, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಅನಿಲ್ ರೆಡ್ಡಿ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.