ಪ್ರವಾಸಿ ಭಾರತ ವಿರುದ್ಧದ ಮುಂಬರುವ ವೈಟ್-ಬಾಲ್ ಸರಣಿಗಾಗಿ ಕ್ರಿಕಟ್ ಆಸ್ಟ್ರೇಲಿಯಾವು ಏಕದಿನ ಮತ್ತು ಟಿ೨೦ಐ ತಂಡಗಳನ್ನು ಪ್ರಕಟಿಸಿದ್ದು ಮಿಚೆಲ್ ಮಾರ್ಶ್ ಅವರು ಎರಡೂ ತಂಡಗಳನ್ನು ಮುನ್ನಡೆಸಲಿದ್ದಾರೆ. ಬೆನ್ನುನೋವಿನ ಸಮಸ್ಯೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ಪ್ಯಾಟ್ ಕಮಿನ್ಸ್ ಅವರು ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲದ ಕಾರಣ ಮಿಚೆಲ್ ಮಾರ್ಷ್ ಅವರಿಗೇ ಟಿ೨೦ಯೊಂದಿಗೆ ಏಕದಿನ ತಂಡದ ಜವಾಬ್ದಾರಿಯನ್ನೂ ಒಪ್ಪಿಸಲಾಗಿದೆ.
ಹಿರಿಯ ಆಟಗಾರರಾದ ಸ್ಟೀವ್ ಸ್ಮಿತ್, ಗ್ಲೆನ್ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯ್ನಿಸ್ ಅವರ ನಿವೃತ್ತಿಯ ಬಳಿಕ ಆಸ್ಟೆçÃಲಿಯಾ ತಂಡದ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ೨೦೨೬ ಟಿ೨೦ ವಿಶ್ವಕಪ್ ಮತ್ತು ೨೦೨೭ರ ಏಕದಿನ ವಿಶ್ವಕಪ್ ಗಳನ್ನು ಗಮನದಲ್ಲಿರಿಸಿ ಕೊಂಡು ತಂಡಗಳನ್ನು ಬಹಳ ತೂಗಿ ಅಳೆದು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ಟಿ೨೦ಐ ನಿವೃತ್ತಿ ಘೋಷಿಸಿದ್ದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಆಗಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದ ನಂತರ ಇದೀಗ ತಂಡಕ್ಕೆ ಮರಳಿದ್ದಾರೆ. ಆ?ಯಶಸ್ ಸರಣಿಗಾಗಿ ಅವರ ಕಾರ್ಯಭಾರವನ್ನು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿತ್ತು. ೧೫ ಸದಸ್ಯರ ಏಕದಿನ ತಂಡದಲ್ಲಿ ಸ್ಟಾರ್ಕ್ ಜೊತೆಗೆ ನಾಲ್ಕು ಹೊಸ ಆಟಗಾರರಿದ್ದಾರೆ. ಇವರಲ್ಲಿ ರೆನ್ಶಾ, ಮ್ಯಾಟ್ ಶಾರ್ಟ್ ಮತ್ತು ಮಿಚ್ ಓವನ್ ಸೇರಿದ್ದಾರೆ. ಓವನ್ ಮತ್ತು ಶಾರ್ಟ್ ಮೂಲತಃ ದಕ್ಷಿಣ
ಆಫ್ರಿಕಾ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಓವನ್ ಟಿ೨೦ ಸರಣಿಯ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದರು, ಇನ್ನು ಶಾರ್ಟ್ ಪಕ್ಕೆಲುಬಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು.
ಓವನ್ ಮತ್ತು ರೆನ್ಶಾ ಭಾರತ ವಿರುದ್ಧ ತಮ್ಮ ಏಕದಿನ ಚೊಚ್ಚಲ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. ದೇಶೀಯ ೫೦-ಓವರ್ಗಳ ಕ್ರಿಕೆಟ್ನಲ್ಲಿ ತಮ್ಮ ಉತ್ತಮ ಪ್ರದರ್ಶನದಿಂದಾಗಿ ಇವರಿಗೆ ಅವಕಾಶ ಸಿಕ್ಕಿದೆ. ಅಲೆಕ್ಸ್ ಕ್ಯಾರಿ ಅವರು ದಕ್ಷಿಣ ಆಸ್ಟೆçÃಲಿಯಾದ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಆಡಲಿರುವುದರಿಂದ ಪರ್ತ್ನಲ್ಲಿ ನಡೆಯುವ ಮೊದಲ ಏಕದಿನ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಆಸ್ಟೆçÃಲಿಯಾ ಏಕದಿನ ತಂಡ ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟೆ್ಲಟ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಬೆನ್ ಡ್ವಾರ್ಶುಯಿಸ್, ನಾಥನ್ ಎಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ. ಆಸ್ಟೆçÃಲಿಯಾ ಟಿ೨೦ ತಂಡ ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟೆ್ಲಟ್, ಟಿಮ್ ಡೇವಿಡ್, ಬೆನ್ ಡ್ವಾರ್ಶು ಯಿಸ್, ನಾಥನ್ ಎಲಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೋಯ್ನಿಸ್, ಆಡಮ್ ಜಂಪಾ.