ಹೈದರಾಬಾದ್: ಸನ್ರೈಸರ್ ಹೈದರಾಬಾದ್ ತಂಡದ ನೂತನ ನಾಯಕರಾಗಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಆಯ್ಕೆಯಾಗುವ ಸಾಧ್ಯತೆ ಇದೆ.
ಬರೋಬ್ಬರಿ 20.50 ಕೋಟಿ ರೂ.ಗಳ ದಾಖಲೆ ಮೊತ್ತಕ್ಕೆ ಕಮಿನ್ಸ್ ಎಸ್ಆರ್ಎಚ್ ಪಾಲಾಗಿದ್ದರು.ಕಮಿನ್ಸ್ಗೆ ಕ್ಯಾಪ್ಟನ್ಸಿ ನೀಡುವ ಯೋಚನೆಯಲ್ಲೇ ಅವರನ್ನು ಸನ್ರೈಸರ್ ಖರೀದಿಸಿತ್ತು ಎಂದು ಹೇಳಲಾಗುತ್ತಿದೆ. ಕಳೆದ ಸೀಸನ್ನಲ್ಲಿ ಐಡನ್ ಮಾರ್ಕ್ರಮ್ ಹೈದರಾಬಾದ್ ತಂಡದ ನಾಯಕರಾಗಿದ್ದರು.
ಫ್ರ್ಯಾಂಕ್ಲಿನ್ ಕೋಚ್: ನ್ಯೂಜಿಲ್ಯಾಂಡ್ನ ಮಾಜಿ ಎಡಗೈ ಪೇಸ್ ಬೌಲರ್ ಜೇಮ್ಸ್ ಫ್ರ್ಯಾಂಕ್ಲಿನ್ ಸನ್ರೈಸರ್ ಬೌಲಿಂಗ್ ಕೋಚ್ ಆಗುವ ಸಾಧ್ಯತೆಯೊಂದು ಕಂಡುಬಂದಿದೆ.