ಕೋಲ್ಕತಾ: ಪಾಟ್ನಾ ಪೈರೇಟ್ಸ್ 5ನೇ ತಂಡವಾಗಿ ಪ್ರೊ ಕಬಡ್ಡಿ ಪ್ಲೇ ಆಫ್ ಪ್ರವೇಶಿಸಿದೆ. ಮಂಗಳವಾರದ ಮುಖಾಮುಖೀಯಲ್ಲಿ ಅದು 38-36 ಅಂತರದಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿತು. ಇದರಿಂದ 4ನೇ ಸ್ಥಾನಕ್ಕೆ ನೆಗೆಯಿತು (68 ಅಂಕ).
ಇದು 21 ಪಂದ್ಯಗಳಲ್ಲಿ ಪಾಟ್ನಾಕ್ಕೆ ಒಲಿದ 11ನೇ ಜಯ. ತೆಲುಗು ಟೈಟಾನ್ಸ್ 20 ಪಂದ್ಯಗಳಲ್ಲಿ 18ನೇ ಸೋಲನುಭವಿಸಿತು. ಪಾಟ್ನಾ ಪರ ರೈಡರ್ ಮಂಜೀತ್ 8, ಸಂದೀಪ್ ಕುಮಾರ್ 7 ಮತ್ತು ಸಚಿನ್ 5 ಅಂಕ ಗಳಿಸಿದರು. ಟೈಟಾನ್ಸ್ ಪರ ನಾಯಕ ಪವನ್ ಸೆಹ್ರಾವತ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು 16 ಅಂಕ ತಂದಿತ್ತರು.