ಗುಂಡ್ಲುಪೇಟೆ: ಪಟ್ಟಣದ ಅಧಿದೇವತೆ ಪಟ್ಟಲದಮ್ಮ ದೇವರ ಜಾತ್ರೆ ಶುಕ್ರವಾರ ಮತ್ತು ಶನಿವಾರ ನಡೆಲಿದೆ.ಶುಕ್ರವಾರ ಸಂಜೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬರುವ ಕಗ್ಗಳದ ಗುರುಮನೆ,ತೆರಕಣಾಂಬಿ ಮಹಾಕಟ್ಟೆ ಮನೆ, ಸೋಮನಪುರ,ಕೋಟೆಕೆರೆ,ತೊಂಡವಾಡಿ ಕಟ್ಟೆಮನೆ ಯಜಮಾನರು ಮತ್ತು ಹಂಗಳ, ಬೇರಂಬಾಡಿ,
ಬೊಮ್ಮಲಾಪುರ, ಕೋಡಸೊಗೆ ವಡ್ಡಗೆರೆ, ಬಾಚಹಳ್ಳಿ, ಶೀಗೆವಾಡಿ, ಕಬ್ಬಹಳ್ಳಿ, ಚಿಕ್ಕಾಟಿ, ಬೆರಟಹಳ್ಳಿ, ಕೆಲಸೂರು, ಮೂಡಗೂರು ಚಿಕ್ಕತುಪ್ಪೂರು, ಇಂಗಲವಾಡಿ, ಹೊಸೂರು, ಹೊಂಗಳ್ಳಿ ಭೀಮನಬೀಡು, ಮೂಖಹಳ್ಳಿ, ತೆಂಕಲಹುಂಡಿ, ಮಲ್ಲಯ್ಯನಪುರ , ರಾಘವಪುರ ಸೇರಿದಂತೆ 35 ಗ್ರಾಮಗಳ ಯಜಮಾನರು ಮತ್ತು ಕುಲಸ್ದರನ್ನು ಪಟ್ಟಣದ ಮದಕರಿನಾಯಕ ವೃತ್ತದಲ್ಲಿ ಗುಂಡ್ಲುಪೇಟೆ ಪಟ್ಟಣದ ಯಜಮಾನರುಗಳು ಸ್ವಾಗತಿಸಿಲಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದ ದೇವತಾ ಕಾರ್ಯಗಳು ನಡೆಯಲಿದೆ, ರಾತ್ರಿ 10 ಗಂಟೆಯ ನಂತರ ದೇವಸ್ಥಾನದಲ್ಲಿ ಮಡೆ ಉಯ್ಯುವ ಕಾರ್ಯ ನಡೆಯಲಿದೆ.ನಂತರ ಬಂಗಾರನಾಯಕ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಶನಿವಾರ ಮಧ್ಯಾಹ್ನ ದೇವಿಯ ಉತ್ಸವ ಮೂರ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗೊಳಡನೆ ಮೆರವಣಿಗೆ ನಡೆಯಲಿದ್ದು ತಾಲ್ಲೂಕಿನ ಕುಲಸ್ಥರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳುವಂತೆ ನಾಯಕ ಜನಾಂಗದ ಯಜಮಾನರಗಳು ಮನವಿ ಮಾಡಿಕೊಂಡಿದ್ದಾರೆ.