ದಿನಾಂಕ 23-6-224 ರಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದ ಪಿಡಿಎನ್ಎ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ (ರಿ)ಯ, 1ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೃಷಿ ಸಚಿವರು, ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರು ಆದ ಚೆಲುವರಾಯ ಸ್ವಾಮಿಯವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಟಿಸಿದರು.
ಬಿಜಿಎಸ್ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರು ಹಾಗೂ ಡೀನ್ ಆದ ಡಾ. ಎಂ.ಜಿ ಶಿವರಾಮು, ನಿವೃತ್ತ ಎಆರ್ಟಿಓ ಎಚ್. ಹನುಮಂತ ರಾಯಪ್ಪ ಮುಂತಾದ ಗಣ್ಯರು ಹಾಜರಿದ್ದರು. ಶ್ರೀಯುತರುಗಳನ್ನು ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ವಿವಿಧ ರಂಗದ ಸಾಧಕರನ್ನು, ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಾದ , ಸಿದ್ದಪ್ಪಾಜಿ.ಪಿ, ಉಮೇಶ್ ಹಾಗೂ ಶಾಂತ ಹನುಮಾನ್ ಟಿ.ಕೆ ಅವರನ್ನು ಗುರುತಿಸಿ “ಮಾಧ್ಯಮ ಸೇವಾ” ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ನೇತೃತ್ವ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನದೀಮ್ ಪಾಷಾ, ಉಪಾಧ್ಯಕ್ಷ ಆಯುಬ್ ಖಾನ್ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.