ಎಂ ಎನ್ ಕೋಟೆ: ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆಯಲ್ಲಿ ಶಿಶು ಅಭಿವೃದ್ದಿ ಇಲಾಖೆ ವತಿಯಿಂದ ಕೂಸಿನ ಮನೆ ನಿರ್ಮಾಣವಾಗಿದ್ದು ಕೂಸಿನ ಮನೆಗೆ ಪಿಡಿಓ ರಾಜೇಂದ್ರ ಪ್ರಸಾದ್ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ಪರೀಶಿಲಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು ಮಕ್ಕಳ ಆರೋಗ್ಯದ ಕಡೆ ಗಮನ ಇಡಿ ಸರಿಯಾದ ಸಮಯಕ್ಕೆ ಹಾಲು ಬಿಸ್ಕೇಟ್ ,ಹಣ್ಣನ್ನು ನೀಡಬೇಕು.ಕೂಸಿನ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡು ಮಕ್ಕಳ ಲಾಲನೆ ಪಾಲನೇ ಮಾಡಬೇಕು ಎಂದರು.ಜತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಜತೆಗೆ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳಬೇಕು.ಕೂಸಿನ ಮನೆ ಪ್ರಾರಂಭ ಆದಾಗ ಕಡಿಮೆ ಸಂಖ್ಯೆಯಲ್ಲಿತ್ತು.
ಹಂತ ಹಂತವಾಗಿ ಮಕ್ಕಳು ಕೂಸಿನ ಮನೆಗೆ ಬರುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಈ ಯೋಜನೆ ಅನುಕೂಲವಾಗಿದೆ ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತಿಮ್ಮೇಗೌಡ, ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯೆ ಕರಿಯಮ್ಮ ರಮೇಶ್ ಸದಸ್ಯರಾದ ಬಸವರಾಜು ,ಮಂಜುಳ , ಶಂಕುತಲಾ , ಮುಖಂಡರಾದ ರಮೇಶ್ ,ಮರಡಿ ರಂಗನಾಥ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.