ದೇವನೊಬ್ಬನೇ ಹಲವು ಹನುಮ ರಾಮನಮತ ಒಂದೇ. ರಾಮನಿದ್ದಲ್ಲಿ ಹನುಮನಿರುವನು.ಹನುಮನಿದ್ದಲ್ಲಿ ರಾಮನಿರುವನು. ಹಾಗೆಯೇ ಎಲ್ಲಾ ದೇವಾಸುರರಲ್ಲಿಯೂ ಒಂದೇ ಪರಮಾತ್ಮನ ಶಕ್ತಿಯಿದ್ದರೂ ಕಾಣುವ ದೃಷ್ಟಿ ಬೇರೆಯಾಗಲು ಕಾರಣ ಜ್ಞಾನವಾಗಿದೆ. ಒಂದೇ ದೇವರಿಗೆ ಅನೇಕ ದೇವಸ್ಥಾನ ಭೂಮಿ ಒಂದೇ ಇದ್ದರೂಅಸಂಖ್ಯಾತ ಜೀವ ಶಕ್ತಿಗಳು. ಇದರಿಂದಾಗಿ ಏಕತೆ ಸಮಾನತೆ ಐಕ್ಯತೆಗೆ ಕೊರತೆ. ಇದನ್ನು ಅಂತರAಗಶುದ್ದಿಯಿಂದಷ್ಟೆ ಅರ್ಥ ಮಾಡಿಕೊಂಡು ದೈವತ್ವದೆಡೆಗೆ ಹೊರಟವರುಮಹಾತ್ಮರಾಗಿ ಶಾಂತಿ ಪಡೆದರು.
ತತ್ವಜ್ಞಾನವು ಯೋಗದೆಡೆಗೆ ನಡೆಸಿದರೆ, ತಂತ್ರಜ್ಞಾನ ಭೋಗದೆಡೆಗೆ ನಡೆಸುತ್ತದೆ. ಇದರಲ್ಲಿ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎನ್ನುವ ಮತಗಳಲ್ಲಿ ಅಡಗಿರುವ ಏಕ ಶಕ್ತಿಯಾದ ಪರಮಾತ್ಮನೆಡೆಗೆ ಸಾಗೋದಕ್ಕೆ ಪ್ರಶಾಂತ ಮನಸ್ಸು ಅಗತ್ಯವಿದೆ. ಪ್ರಶಾಂತ ಮನಸ್ಸಿಗೆ ಸತ್ಯ ಧರ್ಮ ಅಗತ್ಯವಿದೆ. ಸತ್ಯ ಧರ್ಮ ವು ಒಂದೇ ಹಾದಿಯಲ್ಲಿದ್ದರಷ್ಟೆ ಶಾಂತಿ.ಎರಡೂ ಬೇರೆ ಬೇರೆಯಾದಷ್ಟೂ ಕ್ರಾಂತಿ.
ಹಿಂದಿನಿಂದಲೂ ಭೂಮಿಯನ್ನು ಆವರಿಸಿರುವ ಸತ್ಯ ಮತ್ತು ಧರ್ಮದ ನಡುವಿರುವ ಭಿನ್ನಾಭಿಪ್ರಾಯ ದ್ವೇಷ ವೇ ಅಂತರಕ್ಕೆ ಕಾರಣವಾಗುತ್ತಾ ಪರಿಸ್ಥಿತಿ ಹದಗೆಟ್ಟು ಯುದ್ದದಿಂದ ಸಮಾಪ್ತಿ ಆಗಿದೆ ಇದರಿಂದ ನೆಮ್ಮದಿ ಸಿಕ್ಕಿತೆ? ಕೆಲಕಾಲದವರೆಗೆ ಧರ್ಮ ತನ್ನ ಸ್ಥಾನಪಡೆದರೂನಂತರ ಜನರಲ್ಲಿ ಮತ್ತದೇ ರಾಜಕೀಯತೆ ಹೆಚ್ಚಾಗುತ್ತಾ ಅದೇ ಬೇಸರ ಅದೇ ಅಜ್ಞಾನ ಮನಸ್ಸಿನಲ್ಲಿ ಬೆಳೆದುಕೊಂಡು ಬಂದಿದೆ.
ಹಾಗಾದರೆ ಎಲ್ಲದರ ಮೂಲ ರಾಜಕೀಯತೆ ಎಂದಾಗ ಅದರಿಂದ ದೂರವಿರೋದು ಕಷ್ಟ. ಹೀಗಾಗಿ ನಮ್ಮ ಶಾಂತಿ ನಮ್ಮೊಳಗಿನ ಜ್ಞಾನದಲ್ಲಿರುವಾಗ ಸತ್ಯ ಬಿಡದೆ ಧರ್ಮ ದ ಹಾದಿಯಲ್ಲಿ ನಡೆದರೆ ಸದ್ಗತಿ. ಹಿಂದೆ ವರ್ಣ ಗಳ ಪ್ರಕಾರ ಸಮಾಜ ವ್ಯವಸ್ಥೆ ಯಿತ್ತು. ಈಗಿದು ಜಾತಿ ಆಧಾರಿತ ವ್ಯವಸ್ಥೆ ಗೆ ಬದಲಾಗಿದೆ. ಆದರೆ ಧರ್ಮ ಕರ್ಮ ಎಲ್ಲಿದೆ?
ಎಲ್ಲರಿಗೂ ಅವರದೇ ಆದ ಸ್ವಂತ ಬುದ್ದಿ ಜ್ಞಾನವಿದ್ದರೂ ಸೂಕ್ತ ಶಿಕ್ಷಣ ಗುರುಗಳಿಲ್ಲದೆ ಅಂತರ ಬೆಳೆದಿದೆ. ಇದರಿಂದ ಶಾಂತಿಯಿಲ್ಲದೆ ಕ್ರಾಂತಿಯಾಗುತ್ತಿದೆ. ಈಗಲೂ ಕಾಲವಿದೆ ಮುಂದಿನ ಪೀಳಿಗೆಗೆ ಸಾಲ ಬಿಟ್ಟು ಹೋಗಬೇಕೆ ಅಥವಾ ಜ್ಞಾನ ಕೊಟ್ಟು ಹೋಗಬೇಕೆ ಎನ್ನುವುದರಮೇಲೆ ನಮ್ಮ ಶಾಂತಿ ನಿಂತಿದೆ.
ಆತ್ಮಕ್ಕೆ ಶಾಂತಿ ಸಿಗಲಿ ಸದ್ಗತಿ ದೊರೆಯಲಿ ಎಂದು ಜೀವ ಹೋದ ಮೇಲೆ ಪ್ರಾರ್ಥ ನೆ ಮಾಡುವವರು ಹಲವರು.ಅದೇ ಜೀವ ಇದ್ದಾಗ ಶಾಂತಿ ಮಾರ್ಗ ದಲ್ಲಿ ನಡೆಸುವವರು ಸದ್ಗತಿ ಎಂದರೇನೆಂಬ ಶಿಕ್ಷಣ ಕೊಡದವರು ದಾರಿತಪ್ಪಿಸುವ ರಾಜಕೀಯ ನಡೆಸಿದರೆ ಯಾರಿಗೂ ಶಾಂತಿಯಿರದು.ಕಲಿಗಾಲದಲ್ಲಿ ಬೇಲಿಯೇ ಎದ್ದು ಹೊಲಮೇಯುವುದಂತೆ ಎನ್ನುವುದು ನಮ್ಮ ಕಣ್ಣ ಮುಂದೆ ಕಾಣುತ್ತಿದ್ದರೂ ಅವರ ಹಿಂದೆ ನಡೆದು ಶಾಂತಿಯಿಲ್ಲದೆ
ಜೀವನ ನಡೆಸೋದನ್ನು ಸಾಧನೆ ಎನ್ನಬಹುದೆ?
ಸತ್ಯಕ್ಕೆ ಬೆಲೆಯಿಲ್ಲದೆ ಧರ್ಮ ನೆಲೆಸೋದಿಲ್ಲ.
ಒಂದೇ ಸತ್ಯ ಅದ್ವೈತ. ಎರಡು ಸತ್ಯ ದ್ವೈತ ಎಲ್ಲಾ ಸತ್ಯ ವಿಶಿಷ್ಟಾದ್ವೈತ. ಎಲ್ಲರಲ್ಲಿಯೂ ಇದ್ದು ಎಲ್ಲ ರ ನ್ನೂ ನಡೆಸೋ ಒಬ್ಬನನ್ನು ಒಬ್ಬ ವ್ಯಕ್ತಿ ಅರಿತರೆ ಅದ್ವೈತಿ. ಇಬ್ಬರು ಅರಿತರೆ ಧ್ವೈತಿ.ಎಲ್ಲರೂ ಅರಿಯುವುದಕ್ಕೆ ಅಸಾಧ್ಯ.ಹೀಗಾಗಿ ವಿಶೇಷವಾಗಿರುವ ಅದ್ವೈತತವನ್ನು ತಮ್ಮೊಳಗೇ ಕಂಡುಕೊಳ್ಳುವುದಕ್ಕೆ ಪ್ರಯತ್ನಪಟ್ಟರೆ ಫಲವಿದೆ.
ಪ್ರಜಾಪ್ರಭುತ್ವದ ಪ್ರಕಾರ ಇಲ್ಲಿ ಯಾರೂ ಯಾರನ್ನೂ ಆಳಲು ರಾಜರಲ್ಲ.ನಮ್ಮ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ. ಹೀಗಿರುವಾಗ ಸಹಕಾರ ಸತ್ಯಕ್ಕೆ ಧರ್ಮಕ್ಕೆ ಇದ್ದರೆ ಶಾಂತಿ. ಅದರಲ್ಲಿ ವ್ಯವಹಾರವೇ
ಮುಖ್ಯವೆನ್ನುವವರಿಂದ ದೂರವಿದ್ದರೆ ಉತ್ತಮವಷ್ಟೆ. ಸಾಮಾನ್ಯರ ಜ್ಞಾನಕ್ಕೆ ಬೆಲೆಕೊಡದವರ ಹಿಂದೆ ನಡೆದಷ್ಟೂ ಅಶಾಂತಿ ತಪ್ಪಿದ್ದಲ್ಲ.
ಒತ್ತಡರಹಿತ ಜೀವನ ಶಾಂತಿಯ ಕಡೆಗೆ ನಡೆಸಿದರೆ ಒತ್ತಡಸಹಿತ ಜೀವನ ಅಶಾಂತಿ ಸೃಷ್ಟಿ ಮಾಡಿಕೊಂಡಿರುತ್ತದೆ. ಇದನ್ನು ಯಾವುದೇ ಪುರಾಣ ಇತಿಹಾಸ ಓದಿ ತಿಳಿಯುವ ಅಗತ್ಯವಿಲ್ಲ. ಇದರ ಅನುಭವ ಎಲ್ಲರಿಗೂ ಆಗುತ್ತಲೇ ಇರುತ್ತದೆ. ನಿದ್ರೆ ಚೆನ್ನಾಗಿ ಆದರೆ ಶಾಂತಿಯಿಂದ ಕೆಲಸ ಮಾಡಬಹುದು.ನಿದ್ರೆಗೆಟ್ಟರೆ ಮನಸ್ಸಿಗೆ ಕಿರಿಕಿರಿ. ಅಂದರೆ ತಲೆಗೆ ಹಾಕಿಕೊಳ್ಳುವ ವಿಷಯಗಳು, ನೋಡುವ ಕೇಳುವ ಹೇಳುವ ವಿಷಯಗಳಲ್ಲಿ ಸತ್ವ ಸತ್ಯ ತತ್ವವಿರದಿದ್ದರೆ ತಲೆಕೆಟ್ಟು ಮನಸ್ಸಿಗೆ ಬಂದAತೆ ಮನುಷ್ಯನ ಹೋರಾಟ ಹಾರಾಟ ಮಾರಾಟಗಳು ಬೆಳೆಯುತ್ತವೆ ಎಂದರ್ಥ.
ಮಕ್ಕಳ ಮನಸ್ಸು ಶಾಂತಿಯಿAದಿರಬೇಕಾದರೆ ಅವರಿಗೆ ಯಾವ ವಿಚಾರ ವಿಷಯಗಳಲ್ಲಿ ಆಸಕ್ತಿಯಿದೆ ಅದರಿಂದ ಸಂಸಾರ ಮತ್ತು ಸಮಾಜಕ್ಕೆ ಲಾಭವೇ ನಷ್ಟವೇ ಎನ್ನುವ ಜ್ಞಾನ ಪೋಷಕರಲ್ಲಿದ್ದರೆ ಶಾಂತಿಯಿಂದ ಅವರನ್ನು ಬೆಳೆಸಬಹುದಷ್ಟೆ.
ಹೊರಗಿನ ವಿಷಯಗಳನ್ನು ತಲೆಗೆ ತುಂಬಿದಷ್ಟೂ ಬುದ್ದಿವಂತರಾಗುವರೆನ್ನುವ ಅಜ್ಞಾನದಿಂದ ನಮ್ಮ ಮನೆಯ ಸ್ವಂತ ವಿಚಾರದಿಂದ ದೂರವಿಡುವುದರಿಂದ ಸಮಸ್ಯೆ ಬೆಳೆಯಬಹುದು ಅಂತರದಲ್ಲಿ ಮಧ್ಯವರ್ತಿಗಳು ನಿಂತು ಆಳಲೂಬಹುದು.
ದೇಶದೊಳಗೆ ಶಾಂತಿಯಿಲ್ಲ ಎಂದರೆ ನಮ್ಮ ಮನಸ್ಸು ದೇಶದೊಳಗಿದ್ದರೂ ಜ್ಞಾನ ನಮ್ಮದಲ್ಲದ ಕಾರಣದಿಂದ ಅತೃಪ್ತಿ ಕಾಡುತ್ತಿದೆ ಎಂದರ್ಥ.
ಎಲ್ಲಿಯವರೆಗೆ ಮಾನವ ತನ್ನ ಮನಸ್ಸನ್ನು ಯೋಗ್ಯರೀತಿಯಲ್ಲಿ ಯೋಗದೆಡೆಗೆ ತೆಗೆದುಕೊಂಡು ಹೋಗಲಾಗದೋ ಅಲ್ಲಿಯವರೆಗೆ ಅಶಾಂತಿಯ ಗೂಡಾಗಿರುತ್ತದೆ.
ಹಿಂದಿನ ಮಹರ್ಷಿಗಳು ಭೂಮಿಯಲ್ಲಿ ಶಾಂತಿ ನೆಲೆಸಲು ತಪಸ್ವಿಗಳಾದರು. ಈಗ ಕೋಪತಾಪಗಳಿಂದ ಮನಸ್ಸು ಕುದಿಯುತ್ತಲೇ ಇರಲು ಕಾರಣವೇ ನಾವೇ ಅನಾವಶ್ಯಕ ಸುದ್ದಿ ಸಂಗ್ರಹಗಳ ಕಡೆಗೆ ಮನಸ್ಸನ್ನು ಹೊರಳಿಸಿಕೊಂಡು ರಾಜಕೀಯ ದೆಡೆಗೆ ನಡೆದಿರೋದೆಂದರೆ ತಪ್ಪಾಗದು.
ರಾಜಕೀಯ ಯಾವತ್ತೂ ಒಂದಾಗಿರಲುಬಿಡೋದಿಲ್ಲ ಎಂದಾಗ ಒಮ್ಮತ ಹೇಗೆ ಬರಲು ಸಾಧ್ಯ? ದೇಶ ಒಂದೇ ಆಗಿದ್ದರೂ ಒಳಗಿರುವ ಅನೇಕ ಧರ್ಮ, ಮತ, ಪಂಗಡ,ಜಾತಿ,ಪಕ್ಷಗಳು ಜನರನ್ನು ಬೇರೆ ಬೇರೆಯಾಗಿಸುತ್ತಾ ಆಳೋದರಿಂದ ಯಾರಿಗಾದರೂ ಶಾಂತಿ ಸಿಗುವುದೆ?
ಶಾಂತಿ ಎನ್ನುವುದು ಒಳಗೇ ಅಡಗಿರುವ ಶಕ್ತಿ. ನಕಾರಾತ್ಮಕ ಗುಣಜ್ಞಾನದಿಂದ ಹೊರಹೋದವರಿಗಷ್ಟೆ ಇದರ ಅನುಭವ ಆಗಿದೆ. ಹೀಗಾಗಿ ಶಾಂತಿಮಾರ್ಗ ರಾಜಕೀಯದಲ್ಲಿಲ್ಲ.
ಹಾಗೇನಾದರೂ ಇದ್ದಿದ್ದರೆ ಯುದ್ದಗಳೇ ಆಗುತ್ತಿರಲಿಲ್ಲ.
ಯುದ್ದಕ್ಕೆ ಕಾರಣವೇ ಅಜ್ಞಾನದ ನಡೆ ನುಡಿ.ಇದಕ್ಕೆ ಸಹಕಾರ ಕೊಡುವವರನ್ನು ಬದಲಾಯಿಸಲು ಹೋಗುವ ಬದಲಾಗಿ ನಾವು ಬದಲಾದರೆ ಉತ್ತಮ.
ಕಾರಣವಿಷ್ಟೆ ನಮ್ಮ ಒಳಗಿರುವ ಶಕ್ತಿಯನ್ನು ನಾವೇ ಹುಡುಕಿಕೊಂಡು ಜೀವನನಡೆಸುವುದೇ ಶಾಂತಿ ಮಾರ್ಗ.
ಹೊರಗೆ ತಿರುಗಿದಷ್ಟೂ ಹಿಂದಿರುಗಿ ಬರೋದು ಕಷ್ಟವಿದೆ.
ದೇಶ ಸುತ್ತು ಕೋಶ ಓದು ಎನ್ನುವುದು ವಿಜ್ಞಾನ. ಆದರೆ ಯಾವ ದೇಶ ಸುತ್ತಬೇಕು ಯಾವ ಕೋಶ ಓದಬೇಕೆಂಬುದರ ಅರಿವಿರೋದು ಒಳಗೇ .ಇದನ್ನು ಹೊರಗಿನವರಿಂದ ತಿಳಿಯೋ ಬದಲಾಗಿ ಒಳಗಿನವರು ತಿಳಿಸಿ ಬೆಳೆಸಿದ್ದರೆ ಈ ಸ್ಥಿತಿ ಭಾರತಕ್ಕೆ ಬರುತ್ತಿರಲಿಲ್ಲ.
ಒಟ್ಟಿನಲ್ಲಿ ಸೃಷ್ಟಿ ಸರಿಪಡಿಸದೆ ಸ್ಥಿತಿ ಲಯವನ್ನು ಸರಿಯಿಲ್ಲ ಎನ್ನುವುದೂ ತಪ್ಪು.
ಶಿಕ್ಷಣವೇ ಹೊರಗಿನವರ ವಿಷಯವಾದರೆ ಸ್ವಂತ ಬುದ್ದಿ ಜ್ಞಾನವಿಲ್ಲದವರಿಗೆ ಅಶಾಂತಿ ಕಾಡುವುದು ಸಹಜ.
ಪರಾವಲಂಬನೆ ನರಕ ಸ್ವಾವಲಂಬನೆ ಸ್ವರ್ಗ.
ನಮ್ಮ ಜ್ಞಾನ ವಿಜ್ಞಾನ ದ ನಡುವಿರುವ ಸಾಮಾನ್ಯಜ್ಞಾನಕ್ಕೆ ಯಾರು ಹೊಣೆ?
– ಭಗವತಿ ಬೆಂಗಳೂರು



