ಕೆ.ಆರ್.ಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಮಹದೇವಪುರ ಹಾಗೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಬಿರುಸುನಿಂದಲೇ ಎಲ್ಲೆಡೆ ಮತದಾನ ನಡೆಯಿತು. ಕೆ.ಆರ್.ಪುರನ ಮೇಡಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಅವರು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಗೋ ಪೂಜೆ ಸಲ್ಲಿಸಿ ಮೊದಲಿಗರಾಗಿ ವೋಟು ಹಾಕಿ ಗಮನ ಸೆಳೆದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಪತಿ ಶಾಸಕ ಅರವಿಂದ ಲಿಂಬಾವಳಿ ರವರು ಕುಟುಂಬವೂ ಸಿ.ವಿ. ರಾಮನ್ ನಗರ ಕ್ಷೇತ್ರದ ನ್ಯೂ ತಿಪ್ಪಸಂದ್ರ ಬಳಿಯ ನ್ಯಾಷನಲ್ ಎಕ್ಸಲೆನ್ಸಿ ಶಾಲೆಯಲ್ಲಿ ಮತ ಚಲಾಯಿಸಿದರು.
ಮಹದೇವಪುರ ಕ್ಷೇತ್ರದ ಗುಂಜೂರು, ವರ್ತೂರು, ಹಗದೂರು, ಗ್ರಾಮಾಂತರ ಭಾಗದ ಶೀಗೆಹಳ್ಳಿ, ಬಿದರಹಳ್ಳಿ, ಕಣ್ಣೂರು ಹಾಗೂ ಕಿತ್ತಗನೂರು ಸೇರಿದಂತೆ ಎಲ್ಲೆಡೆ ಶಾಂತಿಯುತ ಮತದಾನ ನಡೆಯಿತು.
ತಮ್ಮ ಪಕ್ಷದ ಆಭ್ಯರ್ಥಿಗಳೇ ಕೊರಳಿಗೆ ವಿಜಯದ ಮಾಲೆ ಧರಿಸಲಿದ್ದಾರೆ ಎಂದು ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.ಪಾರದರ್ಶಕ ಚುನಾವಣೆಗಾಗಿ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಿದ್ದತೆ ಹಾಗೂ ಪೊಲೀಸರು ಬಂದೋಬಸ್ತ್ ನಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮತಕೇಂದ್ರಗಳಲ್ಲಿ ಸಣ್ಣಪುಟ್ಟ ಅಡಚಣೆ ಹೊರತುಪಡಿಸಿದರೆ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಲಿಲ್ಲ.
ವರಿಷ್ಠರು ಮಹಿಳೆ ಎನ್ನುವ ಕಾರಣಕ್ಕಾಗಿ ಚುನಾವಣೆಗೆ ಅವಕಾಶ ಕಲ್ಪಿಸಿದ್ದಾರೆ. ಮತದಾರರು ನನಗೆ ಮತ ನೀಡಿ ಆಶೀರ್ವಾದ ನೀಡುವ ಭರವಸೆ ಇದೆ. ಗೆದ್ದ ನಂತರ ಪತಿ ಶಾಸಕ ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಹೇಳಿದರು.
Leave a Review