ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ ಸುರಂಗ ರಸ್ತೆ ನಿರ್ಮಾಣಕ್ಕೆ ಸುಮಾರು ೬ ಎಕರೆ ಭೂಮಿ ಬಳಸುವ ಯೋಚನೆಯು ವಿವಾದಕ್ಕೆ ಕಾರಣವಾಗಿದ್ದು. ಈ ಸಂಬAಧ ಯೋಜನೆಗೆ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದ್ದಾರೆ.
ಲಾಲ್ಬಾಗ್ನಲ್ಲಿ ಅಶೋಕ್ ಅವರ ನೇತೃತ್ವದಲ್ಲಿ ಟನಲ್ ನಿರ್ಮಾಣಕ್ಕೆ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಲಾಲ್ಬಾಗ್ನಲ್ಲಿ ೩೦೦ ದಶಲಕ್ಷ ವರ್ಷಗಳಷ್ಟು ಹಳೆಯದಾದ ಬಂಡೆ ಮತ್ತು ೨೦೦ ವರ್ಷಗಳಷ್ಟು ಹಳೆಯ ಕೆಂಪೇಗೌಡ ಗೋಪುರವೂ ಇದೆ. ಸುರಂಗ ರಸ್ತೆ ಯೋಜನೆಯು ಲಾಲ್ಬಾಗ್ನ ಪ್ರಮುಖ ಪ್ರವೇಶದ್ವಾರದಿಂದ ಎಂ.ಟಿ.ಆರ್ ಗೇಟ್ ಮತ್ತು ಸಿದ್ದಾಪುರ ಗೇಟ್ವರೆಗೆ ಹಾದುಹೋಗಲಿದೆ ಎಂದು ಹೇಳಿದ್ದಾರೆ.ಇದಕ್ಕುತ್ತರಿಸಿರುವ ಜಂಟಿ ನಿರ್ದೇಶಕರು, ಇಲಾಖೆಯು ಇನ್ನು ಯಾವುದೇ ಪ್ರಾಜೆಕ್ಟ್ ವರದಿ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನುಮತಿ ನೀಡುವ ಮೊದಲೇ ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭವಾಗಿರುವುದು ಅಶೋಕ್ ಅವರ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಯೋಜನೆಗೆ ೧೨೦ ಡಿಪಾರ್ಟ್ಮೆಂಟ್ ಇಂದ ಅನುಮತಿ ಬೇಕು. ಆದರೆ ಒಬ್ಬರ ಅನುಮತಿಯನ್ನೂ ತೆಗೆದುಕೊಂಡಿಲ್ಲ. ಬಿಹಾರ, ತಮಿಳುನಾಡು ಎಲೆಕ್ಷನ್ಗಾಗಿ ಮತ್ತು ಹಣ ಲೂಟಿ ಮಾಡುವ ಉದ್ದೇಶದಿಂದ ಈ ಯೋಜನೆಗೆ ಕೈ ಹಾಕಲಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್, ಲೇಕ್ಗಳನ್ನು ಹುಡುಕುತ್ತಿದ್ದಾರೆ. ಇದು ಮನೆಹಾಳು ಕೆಲಸ ಅಲ್ವಾ? ಕೆಂಪೇಗೌಡರ ಆಶಯಕ್ಕೆ ಕೊಳ್ಳಿ ಇಡ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ಆಗ್ಬೇಕು. ಲಾಲ್ ಬಾಗ್ ಬೆಂಗಳೂರಿನ ಶ್ವಾಸಕೋಶ ಇದ್ದಹಾಗೆ. ಮೊದಲು ಬೆಂಗಳೂರಿನಲ್ಲಿರುವ ಗುಂಡಿ ಮುಚ್ಚಿ, ನಂತರ ಚಂದ್ರಲೋಕಕ್ಕೆ ಟನಲ್ ಮಾಡಿ ಎಂದು ವ್ಯಂಗ್ಯ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.



