ಬೆಂಗಳೂರು: ಇದೇ ಮೊದಲ ಬಾರಿಗೆ ಕಾಲೇಜು ಆವರಣದಲ್ಲಿ ನಗರದಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜುಗಳ 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ.ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಪೋಷಕರಿಗೆ ದಂಡ ವಿಧಿಸಲಾಗಿದೆ. ಮಕ್ಕಳಿಗೆ ಬೈಕ್ ಕೊಡುವ ಮುನ್ನ ಎಚ್ಚರ ವಹಿಸಬೇಕು ಎಂದು ಅವರ ಪೋಷಕರಿಗೆ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳು ಮಾಡುವ ತಪ್ಪಿಗೆ ಪೋಷಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲೈಸೆನ್ಸ್ ಇಲ್ಲದೆ ವಿದ್ಯಾರ್ಥಿಗಳು ವಾಹನಗಳನ್ನ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜುಗಳ 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸಕ್ರ್ಯೂಲರ್ ಹೊರಡಿಸಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಅಪ್ರಾಪ್ತರು ವಾಹನ ತರದಂತೆ ಸಕ್ರ್ಯೂಲರ್ ಹೊರಡಿಸಬೇಕು ಎಂದು ತಿಳಿಸಿದ್ದಾರೆ.
ತಪ್ಪಿದರೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಕಾಲೇಜು ಆವರಣದಲ್ಲಿದ್ದ ಸುಮಾರು 800 ವಾಹನಗಳಿಗೆ ಈಗಾಗಲೇ ದಂಡ ಬಿದ್ದಿದೆ. ಪರೀಕ್ಷೆ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಈ ಬಾರಿ ದಂಡ ಮಾತ್ರ ವಿಧಿಸಲಾಗಿದೆ. ಮತ್ತೊಮ್ಮೆ ಇದೇ ರೀತಿ ನಡೆದರೆ ಐಪಿಸಿ ಸೆಕ್ಷನ್ ನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.