ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾಗೆ ಸೋಲಿನ ಜೊತೆ ದಂಡದ ಬರೆ ಸಿಕ್ಕಿದೆ. ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನಿಂಗ್ಸ್ ಅಂತರದಿಂದ ಸೋಲು ಕಂಡಿತ್ತು. ಈ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯ ಕಂಡಿತ್ತು.
ಹಾಗಿದ್ದರೂ ಟೀಂ ಇಂಡಿಯಾಗೆ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಶಿಕ್ಷೆ ಸಿಕ್ಕಿದೆ.ಭಾರತ ತಂಡ ನಿಗದಿತ ಸಮಯಕ್ಕಿಂತ ಎರಡು ಓವರ್ ಗಳಷ್ಟು ಹಿನ್ನಡೆಯಲ್ಲಿತ್ತು.ಈ ಕಾರಣಕ್ಕೆ ಐಸಿಸಿ ತಂಡಕ್ಕೆ ಶೇ.10 ರಷ್ಟು ಸಂಭಾವನೆ ಕಡಿತದ ಶಿಕ್ಷೆ ನೀಡಿದೆ.
ಮ್ಯಾಚ್ ರೆಫರಿ ಮತ್ತು ಅಂಪಾಯರ್ ಗಳ ಅನುಮೋದನೆ ಮೇರೆಗೆ ಶಿಕ್ಷೆ ವಿಧಿಸಲಾಗಿದೆ. ಈ ಟೆಸ್ಟ್ ಪಂದ್ಯದ ಸೋಲಿನಿಂದ ಟೀಂ ಇಂಡಿಯಾ ದಂಡ ಮಾತ್ರವಲ್ಲ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಕುಸಿತ ಕಂಡಿದ್ದು, ಇದೀಗ ಐದನೇ ಸ್ಥಾನಕ್ಕೆ ಜಾರಿದೆ.