ಬೇಲೂರು: ಸಮಾಜ ಸೇವೆಯ ಉದ್ದೇಶದಿಂದ ಬೇಲೂರಿನ ಲಯನ್ಸ್ ಕ್ಲಬ್ ವತಿಯಿಂದ ಇಂದು ಬೇಲೂರು ನಗರದ ದೇವಸ್ಥಾನದ ರಸ್ತೆಯಲ್ಲಿರುವ ಕಾವೇರಿ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತು. ಈ ಶಿಬಿರದಲ್ಲಿ ಸ್ಥಳೀಯ ಜನರಿಗೆ ವೈದ್ಯಕೀಯ ಪರೀಕ್ಷೆ, ರಕ್ತದ ಒತ್ತಡ, ಮಧುಮೇಹ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷೆಯಾದ ತಾರಾಮಣಿಸುರೇಶ್ ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ತಾರಾಮಣಿಸುರೇಶ್, ಬೇಲೂರಿನಲ್ಲಿ ಈ ವರ್ಷ ನಮ್ಮ ಈ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಅದರಂತೆ ಇನ್ನೂಒಂದು ದೊಡ್ಡ ಕಾರ್ಯಕ್ರಮವನ್ನು ಮಾಡಬೇಕೆಂದು ನಮ್ಮ ಸಂಸ್ಥೆಯಲ್ಲಿ ಚರ್ಚಿಸಿದಾಗ ಡಾ|| ಚಂದ್ರಮೌಳಿ ರವರು ಬಡವರಿಗಾಗಿ ನುರಿತ ಡಾಕ್ಟರ್ ಗಳು ಹಾಗೂ ತಜ್ಞರನ್ನು ಕರೆಸಿ ಉಚಿತವಾಗಿ ಸಾರ್ವಜಿನಿಕರಿಗೆ ತಪಾಸಣಾ ಶಿಬಿರವನ್ನು ಮಾಡೋಣ ಎಂದು ತಿಳಿಸಿದಾಗ ನಾವೇಲ್ಲರೂ ಒಪ್ಪಿ ಹಾಸನದ ಎಂ.ಎಂ.ಎಂ ಆಸ್ಪತ್ರೆ ಹಾಗೂ ಚಿಕ್ಕಮಗಳೂರಿನ ಕೆ.ಆರ್.ಎಸ್. ನ ಡಾಕ್ಟರ್ ಗಳು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಅವರೆಲ್ಲರೂ ವಾರದ 6 ದಿನ ವೃತ್ತಿಯಲ್ಲಿ ಸೇವೆ ಮಾಡಿದರೂ ಈ ದಿನ ನಮ್ಮ ಲಯನ್ಸ್ ಕ್ಲಬ್ ನ ಜೊತೆಗೆ ಕೈಜೋಡಿಸುವುದರ ಮೂಲಕ ಸೇವೆಯಲ್ಲಿ ನಿರತರಾಗಿದ್ದಾರೆ ಅವರಿಗೆ ನಮ್ಮ ಲಯನ್ಸ್ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಬೇಲೂರಿನಲ್ಲಿ ಯಾವುದೇ ರೀತಿಯ ಹೆಚ್ಚಿನ ವ್ಯವಸ್ಥೆ ಇರುವ ಆಸ್ಪತ್ರೆಯಾಗಲೀ ನರ್ಸಿಂಗ್ ಹೋಂಗಳು ಇಲ್ಲಾ ಹೆಚ್ಚಿನ ಚಿಕಿತ್ಸೆ ಪಡೆಯಬೇಕೆಂದರೆ ಎಲ್ಲರೂ ಹಾಸನ, ಚಿಕ್ಕಮಗಳೂರು, ಬೆಂಗಳೂರು ಹೋಗಬೇಕಾಗುತ್ತದೆ. ಅದಕ್ಕೆ ನಮ್ಮ ಸಂಸ್ಥೆಯಿAದ ಯೋಚನೆ ಮಾಡಿ ಎಲ್ಲಾ ವಿವಿಧ ತಜ್ಞರನ್ನು ಈ ದಿನ ಬೇಲೂರಿಗೆ ಆಹ್ವಾನಿಸಿದ್ದೇವೆ ಅದರಂತೆ ಎಲ್ಲರೂ ತುಂಬು ಮನಸ್ಸಿನಿಂದ ವೈಧ್ಯರು ಬಂದಿದ್ದಾರೆ ಆದರಿಂದ ಬೇಲೂರಿನ ಜನತೆ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ನಂತರ ಡಾ|| ಚಂದ್ರಮೌಳಿ ಮಾತಾನಾಡಿ ಈ ನಮ್ಮ ಲಯನ್ಸ್ ಸಂಸ್ಥೆಯ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ಅದೇ ರೀತಿ ಈ ಬಾರಿ ಏನೂ ಮಾಡಬೇಕು ಎಂದು ನಮ್ಮ ಕ್ಲಬ್ ನಲ್ಲಿ ಚರ್ಚಿಸಿದಾಗ ಬಡವರಿಗೆ ಉಚಿತವಾಗಿ ಆರೋಗ್ಯ ಶಿಬಿರವನ್ನು ಮಾಡಬೇಕೆಂದು ಎಲ್ಲಾ ತಿರ್ಮಾನಿಸಿ ಈ ಕಾರ್ಯಕ್ರಮವನ್ನು ಮಾಡಿದ್ದೇವೆ. ಈ ಉಚಿತ ಆರೋಗ್ಯ ಶಿಬಿರಕ್ಕೆ ಹಾಸನ ಹಾಗೂ ಚಿಕ್ಕಮಗಳೂರಿನಿಂದ ಹೆಸರಾಂತ ಡಾಕ್ಟರ್ ಗಳು ಹಾಗೂ ನುರಿತ ತಜ್ಞರು ಬಂದಿದ್ದಾರೆ. ಇವರನ್ನು ಅವರ ಆಸ್ಪತ್ರೆಗಳಲ್ಲಿ ನಾವು ಬೇಟಿ ಮಾಡುವದೇ ಕಷ್ಟಸಾಧ್ಯ ಏಕೆಂದರೆ ಯಾವಾಗಲೂ ಆಸ್ಪತ್ರೆ ಹಾಗೂ ರೋಗಿಗಳ ನಡುವೆ ತಮ್ಮ ಸೇವೆ ಸಲ್ಲಿಸುತ್ತಿರುತ್ತಾರೆ ಅಂತದರಲ್ಲಿ ಇವತ್ತು ಬಿಡುವು ಮಾಡಿಕೊಂಡು ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೋಂಡಿದ್ದಾರೆ ಇದರ ಸದೂಪಯೋಗವನ್ನು ಬೇಲೂರಿನ ನಾಗರೀಕರೆಲ್ಲರೂ ಪಡೆದುಕೊಳ್ಳುಲಿದ್ದಾರೆ ಹಾಗೂ ಬೆಳಗ್ಗೆಯಿಂದಲೂ ಸಾಕಷ್ಟು ಜನ ಈ ಆರೋಗ್ಯ ಶಿಬಿರಕ್ಕೆ ಬಂದು ನೊಂದಣಿ ಮಾಡಿಸುತ್ತಿದ್ದಾರೆ ನಿಮ್ಮಿಂದ ಈ ರೀತಿ ಸಹಕಾರ ಸಿಗುತ್ತಿರುವುದರಿಂದ ಮುಂದೆ ಇನ್ನು ಜನಪರ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯವತಿಯಿAದ ನೆಡೆಸಲಾಗುತ್ತದೆ ಎಂದರು ಹಾಗೇ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಅನಾರೋಗ್ಯಕ್ಕೆ ಕಾರಣವಾಗಿದೆ. ನಮ್ಮಗಳ ದೇಹದಲ್ಲಿ ಏನಾಗಿದೆ ಎನ್ನುವ ಅರಿವೆ ಇಲ್ಲದೆ ಇರುತ್ತೇವೆ. ಸಾಕಷ್ಷು ಜನರಿಗೆ ರಕ್ತದೊತ್ತಡ. ಶುಗರ್ (ಮಧುಮೇಹ) ಇರುವುದೇ ಗೊತ್ತಿರಲ್ಲ ಸಾಮಾನ್ಯವಾಗಿ ಒಬ್ಬ ಮನುಷ್ಯ ತಿಂಡಿ ತಿಂದ ನಂತರ ಅವನ ಶುಗರ್ ಲೆವೆಲ್ 140 ರಿಂದ 150 ಇರಬೇಕು ಅದು 170 ಇದ್ದರೆ ಅದು ಬಾರ್ಡರ್ ಲೆವೆಲ್ ಎನ್ನುತ್ತೇವೆ. ಈ ರೀತಿಯ ಖಾಯಿಲೆಗಳನ್ನು ಆಹಾರ ಪದ್ದತಿಯಿಂದ ಹಾಗೇಯೆ ವ್ಯಾಯಮಗಳಿಂದ ಕಡಿಮೆ ಮಾಡಬಹುದು ಇಲ್ಲದಿದ್ದಲ್ಲಿ ಸೂಕ್ತವಾದ ಚಿಕಿತ್ಸೆಯ ಮೂಲಕ ನಿಯಂತ್ರಣ ಮಾಡಬಹುದಾಗಿದೆ ಈ ದೃಷ್ಟಿಯಲ್ಲಿ ನಾವು ಉಚಿತವಾಗಿ ಮಧುಮೇಹ ತಪಾಸಣೆ, ರಕ್ತದೊತ್ತಡ ಮತ್ತು ಕಣ್ಣಿನ ತಪಾಸಣೆಯನ್ನುಮಾಡುತ್ತಿದ್ದೇವೆ. ಆದರಿಂದ ಸಾರ್ವಜನಿಕರು ಈ ರೀತಿಯ ಕಾರ್ಯಕ್ರಮಗಳನ್ನು ಮಾಡಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದೂಪಯೋಗ ಪಡೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು. ಹಾಗೇಯೇ ನಮ್ಮ ಈ ಕಾರ್ಯಕ್ರಮ ಜನತೆಗೆ ತಲುಪಬೇಕೆಂದು ದೃಷ್ಠಿಯಿಂದ ನಮ್ಮ ಪತ್ರಿಕಾಮಿತ್ರರಲ್ಲಿ ತಿಳಿಸಿದಾಗ ಸ್ವಯಂ ಮುತುವರ್ಜಿ ವಹಿಸಿ ಅವರ ಪತ್ರಿಕೆಗಳಲ್ಲಿ ಹಾಗೂ ಸಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಇಷ್ಟೊಂದು ಸಾರ್ವಜನಿಕರು ಸೇರಲು ಕಾರಣವಾಗಿದ್ದಾರೆ ಅವರಿಗೆ ಅಭಾರಿಯಾಗಿದ್ದೇನೆ ಎಂದರು.
ನAತರ ಡಾ||. ಉಮೇಶ್ ಮಾತಾನಾಡಿ ಜನರ ಸೇವೆಗಾಗಿ ನಾವು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ ನಮ್ಮ ಆಸ್ಪತ್ರೆವತಿಯಿಂದ ಇದು 102 ನೇ ಕ್ಯಾಂಪ್ ಗ್ರಾಮೀಣ ಮಟ್ಟದಲ್ಲಿ ಒಂದು ಸೇವೆಯನ್ನು ಸಲ್ಲಿಸಬೇಕೆಂಬ ದೃಷ್ಠಿಯಿಂದ ನಾವು ಭಾಗವಹಿಸಿದ್ದೇವೆ. ಸಾಮಾನ್ಯ ಜನರು ಅಂದುಕೊAಡಿರುತ್ತಾರೆ ನಾವು ಆರಾಮಾಗಿದ್ದೇನೆ, ಕೆಲಸಮಾಡಿಕೊಂಡಿದ್ದೇನೆ ಸುಸ್ತು ಎನೂ ಇಲ್ಲಾ ನನಗೆ ಏನು ಖಾಯಿಲೆ ಬಂದಿಲ್ಲಾ ಬರುವುದಿಲ್ಲಾ ಒಳಗೆ ಇರುವ ಎಲ್ಲಾ ಅಂಗಗಳು ಚನ್ನಾಗಿ ಕೆಲಸ ಮಾಡುತ್ತಿದ್ದಾವೆ ಅಂದ್ಕೊಂಡಿರುತ್ತಾರೆ ಅದು ತಪ್ಪು. ಖಾಯಿಲೆ ತುಂಬಾ ಉಲ್ಬಣಗೊಂಡಾಗ ಮಾತ್ರ ಗೋತ್ತಾಗುತ್ತೆ. ಅದರಲ್ಲಿ ಮುಖ್ಯವಾಗಿ ಬಿ.ಪಿ. ಮತ್ತು ಶುಗರ್ ಪ್ರಾಥಮಿಕ ಹಂತದಲ್ಲಿ ಗೋತ್ತಾಗುವುದಿಲ್ಲಾ ಇದನ್ನು ನಿಯಮಿತವಾಗಿ ಪರೀಶಿಲಿಸಿಕೊಳ್ಳುತ್ತಿರಬೇಕು ಅ ನಿಟ್ಟಿನಲ್ಲಿ ಈ ರೀತಿಯ ಕ್ಯಾಂಪ್ಗಳು ನಿಮ್ಮೇಲ್ಲರಿಗೂ ಸಹಕಾರಿಯಾಗುತ್ತದೆ. ಅದೇ ರೀತಿ ನಮ್ಮ ಹಾಸನದ ಎಂ.ಎA.ಎA ಆಸ್ಪತ್ರೆಯಲ್ಲೂ ಸಹ ಉಚಿತವಾಗಿ ಬಿ.ಪಿ. ಮತ್ತು ಶುಗರ್ ಹಾಗೂ ಎಕ್ಸರೇಯನ್ನು ಮಾಡಲಾಗುತ್ತದೆ ಇದನ್ನು ಸಹ ಎಲ್ಲರೂ ಸದೂಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಆರೋಗ್ಯ ಶಿಬಿರದಲ್ಲಿ ಡಾ|| ಗುರುಪ್ರಸಾದ್ ಬಾಣೂರು, ಡಾ|| ಉಮೇಶ್, ಡಾ|| ಅವಿನಾಶ್ ಎಸ್.ಕೆ., ಡಾ|| ಲೀಲಾ ಜಿ.ಆರ್. , ಡಾ|| ಮನೋಜ್ ಕುಮಾರ್ ಬಿ.ಕೆ, ಡಾ||ರೋಹನ್ ಚಂದ್ರಮೌಳಿ , ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಸಂತೋಷ್, ಖಜಾಂಚಿ ಆದರ್ಶ , ಅಬ್ದುಲ್ ಲತೀಫ್, ಕೆ ಎಲ್ ಸುರೇಶ್, ಮಂಜುನಾಥ್ ಹಾಗೂ ಸಾರ್ವಜನಿಕರು ಇದ್ದರು.
ಲಯನ್ಸ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸೌಲಭ್ಯವನ್ನು ಪಡೆದುಕೊಂಡ ಬೇಲೂರು ಜನತೆ



