ಮಾಲೂರು: ವೈಯಕ್ತಿಕವಾಗಿ ನನ್ನನ್ನು ಮುಗಿಸಲು ಎಷ್ಟೇ ಪ್ರಯತ್ನ ಪಟ್ಟರು ತಾಲ್ಲೂಕಿನ ಜನತೆಯ ಹಾಗೂ ದೇವರ ಆಶೀರ್ವಾದ ಇರೋವರೆಗೂ ನನ್ನನ್ನು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.ತಾಲ್ಲೂಕಿನ ಟೆಕಲ್ ಹೋಬಳಿಯ ಕೊಮ್ಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇ.ಡಿ. ಇಲಾಖೆಯವರು ದಿನಾಂಕ ಜನವರಿ 8ನೇ ತಾರೀಕು ಬೆಳಗ್ಗೆ 5 ಗಂಟೆಗೆ ನಮ್ಮ ಮನೆ ಪ್ರವೇಶಿಸಿತ್ತು. ಇ.ಡಿ. ಇಲಾಖೆಯವರು ನನ್ನಂತ ಒಬ್ಬ ಸಾಮಾನ್ಯನ ಮನೆಗೆ ಬಂತು ಅಂತ ಎಂಬುವುದು ನೋವಾಗುತ್ತದೆ. ಯಾರೇ ನನ್ನನ್ನು ವೈಯುಕ್ತಿಕವಾಗಿ ಮುಗಿಸಲು ಅನೇಕ ಪ್ರಯತ್ನಪಟ್ಟರು ಸಹ ತಾಲ್ಲೂಕಿನ ಜನತೆ ಹಾಗೂ ದೇವರ ಆಶೀರ್ವಾದದ ನಂಬಿಕೆ ಇದೆ.
ಇ.ಡಿ.ಇಲಾಖೆಯವರು ಹಾಲು ಒಕ್ಕೂಟದ ನೇಮಕಾತಿ, ದರಖಾಸ್ತು ಕಮಿಟಿ ಹಾಗೂ ನಮ್ಮ ಬಿಜಿನೆಸ್ ಬಗ್ಗೆ ಪಸ್ತಾಪಿಸಿದ್ದು ಸಂಪೂರ್ಣವಾಗಿ ಸಹಕಾರ ಮತ್ತು ದಾಖಲೆಗಳನ್ನು ನೀಡಿದ್ದೇನೆ. ತಾಲ್ಲೂಕಿನ ಜನತೆಗೆ ಅವಮಾನವಾಗುವಂತಹದು ನಾನೇನು ಮಾಡಿಲ್ಲ. ಇ.ಡಿ.ಇಲಾಖೆಯವರಿಗೆ ನಾನು ಮತ್ತು ನನ್ನ ಕುಟುಂಬದವರು ಅವರಿಗೆ ಸಂಪೂರ್ಣವಾಗಿ ಸಹಕರಿಸಿರುವುದಾಗಿ ತಿಳಿಸಿದರು.
ನನ್ನ ತಮ್ಮನ ಮಗಳ ಮದುವೆ ಮಾರ್ಚ್ನಲ್ಲಿ ಇರುವುದರಿಂದ ಮದುವೆಗೆ ಸೀರೆ ಕೊಳ್ಳಲು ಹೋಗುವುದಕ್ಕೆ 16 ಲಕ್ಷ ರೂಗಳು ಮನೆಯಲ್ಲಿ ಇಟ್ಟುಕೊಂಡಿದ್ದೇವೆ. ನಾವು ರಿಕ್ವೆಸ್ಟ್ ಮಾಡಿದರೂ ಸಹ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಪರ್ವಾಗಿಲ್ಲ ಅವರ ಕಾನೂನು ರೀತಿಯ ಜವಾಬ್ದಾರಿ ನಿರ್ವಹಿಸಿದ್ದಾರೆ ನಾನು ದಾಖಲೆಗಳನ್ನು ನೀಡಿ ಹಣ ವಾಪಸ್ಸು ಪಡೆಯುತ್ತೇನೆ.ಇ.ಡಿ.ಇಲಾಖೆಯವರು ಯಾವಾಗ ನನ್ನನ್ನು ಕರೆಯುತ್ತಾರೋ ನಾನು ಅವರ ಕಚೇರಿಗೆ ಹೋಗಿ ಸಹಕಾರ ನೀಡುತ್ತೇನೆ ಎಂದರು.