ಕನಕಪುರ: ವಿಕಲಚೇತನರಿಗೆ ರಾಜ್ಯ ಸರ್ಕಾರ ಅವರಿಗೆ ದಕ್ಕಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಂಡು ಬದುಕು ಸಾಗಿಸಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿ.ನಾಗವೇಣಿ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ನಡೆದ 31ನೇ ವಿಶ್ವವಿಕಲ ಚೇತನರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ವಿಕಲಚೇತನರು ಧೃತಿಗೆಡದೇ ಆತ್ಮಸ್ತೈರ್ಯದಿಂದ ಮುನ್ನಡೆದಲ್ಲಿ ಅವರ ಜೀವನದುದ್ದಕ್ಕೂ ಯಶಸ್ವು ಖಚಿತ.
ವಿಕಲಚೇತನರು ಅನಾಥರೆಂಬ ಭಾವನೆಯನ್ನು ಬಿಟ್ಟು ಎಲ್ಲಾ ಸಾಮಾನ್ಯ ಜನರಂತೆ ಬದುಕು ನಡೆಸಲು ಸರ್ಕಾರ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಮಾತನಾಡಿ ವಿಕಲಚೇತನರು ಯಾವುದರಲ್ಲೂ ಕಡಿಮೆ ಇಲ್ಲ. ಕ್ರೀಡೆ, ವಿದ್ಯಾಭ್ಯಾಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ,ಎಲ್ಲರೂ ವಿದ್ಯಾವಂತರಾಗಿ ಮುಂದೆ ಬಂದಲ್ಲಿ ಅವರ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ ಎಂದರು.
ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎಲ್.ಶೀಲ, ಎಡಿಪಿಎ ಅಧ್ಯಕ್ಷ ಶಿವರಾಂ, ಕಾರ್ಯದರ್ಶಿ ರಾಮಚಂದ್ರ, ಎನಬಲ್ ಇಂಡಿಯಾ ಜೈಶಂಕರ್, ಎಂ.ಆರ್.ಡಬ್ಲ್ಯೂ ನಟರಾಜು ಹಾಗೂ ಬಿ.ಆರ್.ಟಿ. ಮತ್ತು ಗ್ರಾಮ ಪಂಚಾಯಿತಿ ಬಿ.ಆರ್ ಡಬ್ಲ್ಯೂಡಿ ವಿಕಲಚೇತನರು ಉಪಸ್ಥಿತರಿದ್ದರು.ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೂರು ಜನ ವಿಕಲಚೇತರಿಗೆ ಹಾಗೂ ಕ್ರೀಡೆಯಲ್ಲಿ ಪದಕ ಗಳಿಸಿದ ಒರ್ವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.