ನವದೆಹಲಿ: ದೇಶದ 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಶೇಕಡಾ 10.82ರಷ್ಟು ಮತದಾನವಾಗಿದೆ.ರಾಜ್ಯವಾರು ಶೇಕಡಾವಾರು ಮತದಾನವನ್ನು ತೆಗೆದುಕೊಳ್ಳುವುದಾದರೆ ಬಿಹಾರದಲ್ಲಿ ಶೇಕಡಾ 9.66, ಹರಿಯಾಣದಲ್ಲಿ ಶೇಕಡಾ 8.31, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡಾ 8.89, ಜಾರ್ಖಂಡ್ ನಲ್ಲಿ ಶೇಕಡಾ 11.74, ದೆಹಲಿಯಲ್ಲಿ ಶೇಕಡಾ 8.94, ಒಡಿಶಾದಲ್ಲಿ ಶೇಕಡಾ 7.43, ಉತ್ತರ ಪ್ರದೇಶದಲ್ಲಿ ಶೇಕಡಾ 12.33 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇಕಡಾ 16.54ರಷ್ಟು ಮತದಾನವಾಗಿದೆ.
ಬೆಳಗ್ಗೆ 9 ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ 16.54% ಮತದಾನವಾಗಿದ್ದು, ಉತ್ತರ ಪ್ರದೇಶದಲ್ಲಿ 12.33% ಮತದಾನವಾಗಿದೆ. ಒಡಿಶಾ ಮತ್ತು ಹರಿಯಾಣದಲ್ಲಿ ಕಳಪೆ ಮತದಾನವಾಗಿದೆ. ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಪ್ರಗತಿಯಲ್ಲಿದೆ. ಒಟ್ಟು 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಾಯಂಕಾಲ 6 ಗಂಟೆಯವರೆಗೆ ಮುಂದುವರಿಯುತ್ತದೆ, ಮುಕ್ತಾಯದ ವೇಳೆಗೆ ಸರದಿಯಲ್ಲಿದ್ದವರಿಗೆ ಇನ್ನೂ ಮತದಾನ ಮಾಡಲು ಅವಕಾಶವಿದೆ.