ಕನಕಪುರ: ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತಾಲ್ಲೂಕಿನ ಡಿಕೆಎಸ್ ಹಿಪ್ಪೋ ಕ್ಯಾಂಪಸ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ತೃತೀಯ ಸ್ಥಾನ ಗಳನ್ನು ಪಡೆದು ತಾಲ್ಲೂಕಿಗೆ ಹಾಗೂ ಶಾಲೆಗೆ ಕೀರ್ತಿ ಯನ್ನು ತಂದಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿಯ ಶ್ರೀ ವಾರಿ ಕನ್ವೆನ್ಷನ್ ಹಾಲ್ ನಲ್ಲಿ ಬುಡೋಕಾನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದ ಡಿ ಕೆ ಎಸ್ ಹಿಪ್ಪೋ ಕ್ಯಾಂಪಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಗಳಾದ ಭುವನ ಮತ್ತು ಭಾನುಶ್ರೀ ಫ್ರೌಢಶಾಲಾ ಹಂತದ ವಿಭಾಗದಲ್ಲಿ ಮೊದಲ ಸ್ಥಾನ ಹಾಗು ಪ್ರಾಥಮಿಕ ವಿಭಾಗದಲ್ಲಿ ಐದನೇ ತರಗತಿ ವಿದ್ಯಾರ್ಥಿನಿಗ ಳಾದ ಚಾತುರ್ಯ ಮತ್ತು ಪ್ರಾರ್ಥನಾ ದ್ವಿತೀಯ ಸ್ಥಾನ ಹಾಗೂ ವಿದ್ಯಾರ್ಥಿಗಳಾದ ಕೀರ್ತನ್, ಸುಭಾಷ್ ಗೌಡ ಹಾಗೂ ಆರನೇ ನೇ ತರಗತಿ ವಿದ್ಯಾರ್ಥಿ ಯಶಸ್.ಆರ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ಶಾಲಾ ಪ್ರಾಂಶುಪಾಲೆ ಅಂತೋಣಿ ಮೇರಿ, ಕರಾಟೆ ಶಿಕ್ಷಕ ಮನು.ಜೆ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.ಕಚೇರಿ ಸ್ಥಳಾಂತರಬೆಂಗಳೂರು ನಗರ ಜಿಲ್ಲೆ: ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಬೆಂಗಳೂರು ನಗರ ಜಿಲ್ಲಾ ಕಚೇರಿಯು ನಂ.214, 12ನೇ ಬಿ. ಮುಖ್ಯ ರಸ್ತೆ, ರಾಜಾಜಿನಗರ 6ನೇ ಬ್ಲಾಕ್, ಬೆಂಗಳೂರು-560010 ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಪ್ರಸ್ತುತ ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ನಗರ ಜಿಲ್ಲಾ ಕಚೇರಿಯನ್ನು ನಂ.21, ವೆಂಕಟಪ್ಪ ರಸ್ತೆ, ಕ್ವೀನ್ಸ್ ರಸ್ತೆ, ಟಸ್ಕರ್ ಟೌನ್, ಬೆಂಗಳೂರು-51 ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.