ಬೆಂಗಳೂರು: ವಿಧಾನಸಭಾ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿಯಿಂದ ಪಕ್ಷದ ಮೇಲೆ ಮುನಿಸಿಕೊಂಡು ದೂರವಾಗಿರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಮನವೊಲಿಕೆ ಮಾಡುವ ಕಾರ್ಯದಲ್ಲಿ ಮುಖಂಡರು ಮುಂದಾಗಿದ್ದಾರೆ.
ಬಾಗಲಕೋಟೆ ಉಪಚುನಾವಣೆಯ ಉಸ್ತುವಾರಿ ವಹಿಸಿದ್ದಾರೆ ಎನ್ನಲಾಗಿರುವ ಸಂಸದ ಗೋವಿಂದಕಾರಜೋಳ ಹಾಗೂ ಅರುಣ್ ಶಹಾಪುರ ಅವರು ಅಸಮಾಧಾನಿತ ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿ ಅವರ ಮನವೊಲಿಸಿ ಪಕ್ಷಕ್ಕೆ ಕರೆತರುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾ ಬಿಜೆಪಿ ಕಚೇರಿಗೆ ನಿನ್ನೆ ಹಲವು ಮುಖಂಡರು ಕಾರ್ಯಕರ್ತರನ್ನು ಕರೆ ತಂದು ಪುನಃ ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳಲಾಗಿದೆ. ಈ ಕಾರ್ಯವು ಇಂದು ಸಹ ಮುಂದುವರಿದಿದೆ.
ದಾವಣಗೆರೆಯಲ್ಲಿ ನಿನ್ನೆ ನಡೆದ ಜಿಲ್ಲಾ ಬಿಜೆಪಿ ಕೋರ ಕಮಿಟಿ ಸಭೆ ನಂತರ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹಾಗೂ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಇಬ್ಬರು ತಮ್ಮ ನಡುವಿನ ಮುನಿಸನ್ನು ಮರೆತು ಕೈಕೈ ಮಿಲಾಯಿಸಿ ತಮ್ಮ ಹಳೆಯ ಕಹಿ ಘಟನೆಗಳಣ್ನು ಮರೆತು ಒಂದಾಗಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಮುನಿಸಿಕೊಂಡವರ ಮನವೊಲಿಕೆ



