ಕೆ ಆರ್ ನಗರ: ಕೇವಲ ಹೆಲ್ಮೆಟ್ ಧರಿಸಿಲ್ಲ ಎಂಬಕಾರಣಕ್ಕೆ ಹಲ್ಲೆ ನಡೆಸಿರುವ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ವಕೀಲರಿಗೆ ರಕ್ಷಣೆ ನೀಡಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಹೆಚ್ಕೆ ಹರೀಶ್ ಸರ್ಕಾರವನ್ನು ಎಚ್ಚರಿಸಿದರು.
ಪಟ್ಟಣದ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಅಧ್ಯಕ್ಷ ಚಂದ್ರ ಮೌಳಿ ಮತ್ತು ಪ್ರಧಾನ ಕಾರ್ಯದರ್ಶಿ ಹೆಚ್ ಕೆ ಹರೀಶ್ ನೇತೃತ್ವದಲ್ಲಿ ಸಾಂಕೇತಿಕ ಧರಣಿ ನಡೆಸಿ ತಹಸಿಲ್ದಾರ್ ಪೂರ್ಣಿಮಾ ರವರಿಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ಅವರು ಇತ್ತೀಚಿಗೆ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು ನಿರ್ಭಯದಿಂದ ಕೆಲಸ ಮಾಡಲು ಆಗದಂತಾಗಿದೆ ಆದ್ದರಿಂದ ಸರ್ಕಾರ ಈ ಕೂಡಲೇ ವಕೀಲರಿಗೆ ರಕ್ಷಣಾತ್ಮಕ ಕಾನೂನನ್ನು ಜಾರಿಗೆ ತರುವ ಮೂಲಕ ವಕೀಲರಿಗೆ ರಕ್ಷಣೆನೀಡಬೇಕೆಂದು ಒತ್ತಾಯಿಸಿದರು.
ರಕ್ಷಣೆ ನೀಡಬೇಕಾದ ಪೊಲೀಸರು ಹಲ್ಲೆ ನಡೆಸಿದ್ದಲ್ಲದೆ ಸವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿ ಕೆಲಸ ಮಾಡಿರುವದು ಖಂಡನೀಯ ಆದ್ದರಿಂದ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಹಲ್ಲೆ ನಡೆಸಿದ ಪೊಲೀಸರನ್ನು ಸೇವೆಯಿಂದ ವಜಾ ಮಾಡುವ ಜೊತೆಗೆ ವಕೀಲರಿಗೆ ರಕ್ಷಣೆ ನೀಡಬೇಕು ಮುಂದೆ ಇನ್ನೆಂದು ಕೂಡ ಇಂತಹ ಕೆಲಸವಾಗದಂತೆ ಎಚ್ಚರಿಕೆ ವಹಿಸುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ವಕೀಲರುಗಳೆಲ್ಲರೂ ಒಮ್ಮತದಿಂದ ನ್ಯಾಯ ಬೇಕು ವಕೀಲರಿಗೆ ರಕ್ಷಣೆ ಬೇಕು ಪೊಲೀಸರಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ನಡೆಸುವ ಜೊತೆಗೆ ಕೆಲ ಕಾಲ ಧರಣಯನ್ನು ನಡೆಸಿದರು ಪ್ರತಿಭಟನೆಯನ್ನು ಉದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ಚಂದ್ರ ಮೌಳಿ ಮಾಜಿ ಅಧ್ಯಕ್ಷ ಎಸ್ ಎಸ್ ಗಾಂಧಿ ತಿಮ್ಮೇಗೌಡ ದಿಲೀಪ್ ಕೆ ಪಿ ಮಂಜುನಾಥ್ ಮಾತನಾಡಿದರು.
ಪ್ರತಿಭಟನೆಯಲ್ಲಿ ವಕೀಲರುಗಳಾದ ವಿಜಯ್ಕುಮಾರ್ ದುರ್ಗೇಶ್ ಪ್ರಸಾದ್ ಎಲ್ ವಿ ರವಿಶಂಕರ್ಹರೀಶ್ ಉದಯಶಂಕರ್ ಪ್ರದೀಪ್ ಡಿಆರ್ ರಮೇಶ್ ಸಿ ಕೆ ಮಂಜುನಾಥ್ ಪ್ರಭಾವತಿ ಅಶ್ವಿನ್ ಸುನಿಲ್ ಜಗದೀಶ್ ಸಂದೀಪ್ ಅರುಣ್ ವಿಶ್ವನಾಥ್ ದಿನೇಶ್ ಮಹೇಶ್ ಸತೀಶ್ ಶಿವರಾಜ್ ನಾಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.