ಮುಳಬಾಗಿಲು: ಜಿಲ್ಲೆಯ ಸರಣಿ ಕೊಲೆ, ಸುಲಿಗೆ, ಗಾಂಜಾ ಪ್ರಕರಣಗಳಲ್ಲಿ ಪೊಲೀಸ್ ಕರ್ತವ್ಯ ಲೋಪದ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಪಡಿಸಿರುವ ಆದೇಶವನ್ನು ವಾಪಸ್ ಪಡೆಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ಮಾಡಬೇಕೆಂದು ರೈತಸಂಘದಿಂದ ಉಪ ತಹಸೀಲ್ದಾರ್ ಮುಖಾಂತರ ಗೃಹಮಂತ್ರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ನಿರಂತರವಾಗಿ ನಡೆಯುತ್ತಿರುವ ಕೊಲೆ, ದರೋಡೆ, ಗಾಂಜಾ ಪ್ರಕರಣಗಳಿಂದ ಜಿಲ್ಲೆಯ ಜನರು ಬೆಚ್ಚಿ ಬೀಳುವ ಜೊತೆಗೆ ಮುಖದ ಮೇಲೆ ಮೀಸೆ ಇರದ ಪಡ್ಡೆ ಹುಡುಗರು ಗಾಂಜಾ ಮಾಧಕ ವಸ್ತುಗಳ ದಾಸರಾಗಿ ಡಾನ್ ರೌಡಿಯಾಗಿ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡು ಅಡ್ಡದಾರಿಯಲ್ಲಿ ಅಕ್ರಮಗಳಿಗೆ ಹಣ ಸಂಪಾದನೆ ಮಾಡುವ ನಿಟ್ಟಿನಲ್ಲಿ ಕೊಲೆಗಳು ಮಾಡುವ ಜೊತೆಗೆ ಆ ಕೊಲೆಗಳನ್ನು ವಿಡಿಯೋ ಮಾಡುವ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ತಂದೆ ತಾಯಿಯರ ಹಿಡಿತವಿಲ್ಲದ ಬೆಳವಣಿಗೆ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯಲ್ಲವೇ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವದಲ್ಲಿ ಉತ್ತಮ ಪ್ರಜೆಯಾಗಬೇಕಾದ ಯುವ ಪೀಳಿಗೆ ಮನಸ್ಸಿನಲ್ಲಿ ನಾನಾ ಯೋಚನೆಗಳನ್ನು ಇಟ್ಟುಕೊಂಡು ಒಂದು ಕಡೆ ಶಿಕ್ಷಣದಿಂದ ವಂಚಿತರಾಗಿ ಮತ್ತೊಂದು ಕಡೆ ಉದ್ಯೋಗವಿಲ್ಲದೆ ಇಂತಹ ಹೀನಕೃತ್ಯಗಳಿಗೆ ಕೈ ಹಾಕಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಹೊಣೆ ಪೊಲೀಸ್ ಇಲಾಖೆಯೇ ?
ತಪ್ಪು ಮಾಡಿದಾಗ ಠಾಣೆಗೆ ಕರೆತಂದು ವಿಚಾರಣೆ ಮಾಡುವ ಹಂತದಲ್ಲಿ ತಂದೆ ತಾಯಿಗಳೇ ಪೊಲೀಸರ ಮೇಲೆ ಒತ್ತಡ ಹಾಕಿ ಶಿಕ್ಷೆಯನ್ನು ತಪ್ಪಿಸಿ ಒಂದು ಸಾರಿ ಅವರಿಗೆ ವಿನಾಯಿತಿ ನೀಡಿ ಎಂದು ಕೇಳುತ್ತಿದ್ದರೆ ಅದಕ್ಕೆ ಪೊಲೀಸರ ಒಪ್ಪದಿದ್ದಾಗ ಅವರ ಮೇಲೆ ಗೂಬೆ ಕೂರಿಸುವ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಆರೋಪ ಮಾಡಿದರು.
ಮಕ್ಕಳ ನಡೆ ನುಡಿಗಳ ಮೇಲೆ ನಿಗಾ ಇಡಬೇಕಾದುದು ತಂದೆ ತಾಯಿಯರ ಆದ್ಯ ಕರ್ತವ್ಯ. ಮತ್ತೊಂದೆಡೆ ಕಾಲೇಜಿಗೆ ಹೋಗುತ್ತಿದ್ದಾನೆಯೇ. ಅವನ ನಡವಳಿಕೆ ಏನು ಎಂದು ಶಾಲೆಯ ಪ್ರಾಂಶುಪಾಲರನ್ನು ಪ್ರಶ್ನೆ ಮಾಡದೆ ಮಕ್ಕಳು ಕೆಟ್ಟು ಜೈಲು ಸೇರಿದಾಗ ಜನ್ಮ ಕೊಟ್ಟವರು ನೋವು ಅನುಭವಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಹಳೆಯ ವೈಷಮ್ಯಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊಲೆಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು.
ರಾಜ್ಯ ಪ್ರ.ಕಾ. ಫಾರೂಖ್ ಪಾಷ ಮಾತನಾಡಿ, ಪ್ರತಿಯೊಂದು ವಿಚಾರವೂ ಪೆÇಲೀಸರ ಗಮನಕ್ಕೆ ಬರುತ್ತದೆಯೇ. ಬಂದರೂ ಅದರ ವಿರುದ್ಧ ತನಿಖೆ ಮಾಡಲು ಮುಂದಾದರೆ ಪೆÇಲೀಸ್ ಕಿರುಕುಳ ಎಂಬ ಪಟ್ಟ ಕಟ್ಟಿ ಹಿರಿಯ ಅಧಿಕಾರಿಗಳ ಮುಖಾಂತರ ಕೆಳ ಹಂತದ ತನಿಖಾ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಪ್ರಕರಣಗಳೂ ದಿನನಿತ್ಯ ನಡೆಯುತ್ತಿವೆ.
ಇನ್ನು ಒಂದು ಕಡೆ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಅಕ್ರಮದ ವಾಸನೆ ಉದ್ಯೋಗಕ್ಕಾಗಿ ಕೋಟಿಕೋಟಿ ಲಂಚ. ಇದರ ಮಧ್ಯೆ ಉದ್ಯೋಗವೂ ಇಲ್ಲ. ಇತ್ತ ಸುಮ್ಮನಿರಲಾಗದೆ ಯುವ ಪ್ರತಿಭೆಗಳು ಅಡ್ಡದಾರಿಯಲ್ಲಿ ದುಡ್ಡು ಸಂಪಾದನೆ ಮಾಡಲು ಗಾಂಜಾ, ಅಫೀಮು ಮಾರಾಟ ದಂಧೆಯಲ್ಲಿ ಸಿಲುಕಿ ತನ್ನ ಜೀವನದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಂದು ಕಡೆ ಸರಣಿ ಹತ್ಯೆಗಳು ಮತ್ತೊಂದು ಕಡೆ ಗಾಂಜಾ ಮಾಫಿಯಾ. ಇದರ ಮಧ್ಯೆ ಪೆÇಲೀಸರಿಗೆ ಕರ್ತವ್ಯ ಲೋಪ ಎಂಬ ಹಣೆಪಟ್ಟಿ ಕಟ್ಟಿ ಅಮಾನತು ಮಾಡುತ್ತಿದ್ದರೆ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವುದು ಯಾರು. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ರಾಜಕಾರಣಿಗಳು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ಪರ ನಿಂತು ಸಂಸದರೇ ಕಾನೂನು ಸುವ್ಯವಸ್ಥೆ ಹದಗೆಡಿಸುತ್ತಿದ್ದರೆ ಅದಕ್ಕೆ ಪೊಲೀಸ್ ಹೊಣೆಯೇ. ಇದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹಾಗಾಗಿ ಗೃಹ ಮಂತ್ರಿಗಳು ಜಿಲ್ಲಾದ್ಯಂತ ನಿರಂತರ ಕೊಲೆ ಸುಲಿಗೆ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಕರ್ತವ್ಯ ಲೋಪದ ಹೆಸರಿನಲ್ಲಿ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರರು, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜೇಶ್, ವಿಜಯಪಾಲ್, ಅಂಬ್ಲಿಕಲ್ ಮಂಜುನಾಥ್, ಜುಬೇರ್ ಪಾಷ, ಸುನೀಲ್ ಕುಮಾರ್, ಭಾಸ್ಕರ್, ವಿಶ್ವ, ಹೆಬ್ಬಣಿ ಆನಂದರೆಡ್ಡಿ ಮುಂತಾದವರಿದ್ದರು.