ಚೆನ್ನೈ: ದುಬೈ ಏರ್ ಶೋ ವೇಳೆ ತೇಜಸ್ ವಿಮಾನ ಪತನ ದುರಂತದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಪಾರ್ಥಿವ ಶರೀರವನ್ನ ಇಂದು ಬೆಳಗ್ಗೆ ಕೊಯಮತ್ತೂರಿನ ಸುಲೂರು ವಾಯುನೆಲೆಗೆ ತರಲಾಯಿತು. ಭಾರತೀಯ ವಾಯುಪಡೆ ಅಧಿಕಾರಿಯ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಇಂದು ಭಾರತಕ್ಕೆ ತರಲಾಯಿತು.
ಅವರ ತವರು ಕಾಂಗ್ರಾದಲ್ಲಿ ಅಂತಿಮ ವಿಧಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ಚಿಕ್ಕಪ್ಪ ಜೋಗಿಂದರನಾಥ ಸಿಯಾಲ್ ಮಾತನಾಡಿ, “ನಾವು ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ” ಎಂದು ಹೇಳಿದರು.
೩೭ ವರ್ಷ ವಯಸ್ಸಿನ ಸಯಾಲ್ ಅವರು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ನಿ, ಅವರ ಆರು ವರ್ಷದ ಮಗಳು ಮತ್ತು ಪೋಷಕರನ್ನು ಅಗಲಿದ್ದಾರೆ. ಭಾರತೀಯ ವಾಯುಪಡೆಯು ಅನುಭವಿ ಪೈಲಟ್ ಅವರನ್ನು ಕಳೆದುಕೊಂಡ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದೆ, ಅವರ ವೃತ್ತಿಪರತೆ ಮತ್ತು ಸ್ಥಿರ ಸೇವೆಯನ್ನು ನೆನಪಿಸಿಕೊಂಡಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಹೃತ್ಪೂರ್ವಕ ಹೇಳಿಕೆಯಲ್ಲಿ, “ಅವರ ಗೌರವಾನ್ವಿತ ವ್ಯಕ್ತಿತ್ವವು ಸೇವೆಗೆ ಮುಡಿಪಾಗಿಟ್ಟ ಜೀವನದ ಮೂಲಕ ಅವರಿಗೆ ಅಪಾರ ಗೌರವವನ್ನು ಗಳಿಸಿತು ಮತ್ತು ಯುಎಇ ಅಧಿಕಾರಿಗಳು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಭಾಗವಹಿಸಿದ ಬೀಳ್ಕೊಡುಗೆಯಲ್ಲಿ ಗೋಚರಿಸಿತು. ತೀವ್ರ ದುಃಖದ ಈ ಸಮಯದಲ್ಲಿ ಐಎಎಫ್ ಅವರ ಕುಟುಂಬದೊAದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ಅವರ ಪರಂಪರೆಯನ್ನು ಗೌರವಿಸುತ್ತದೆ” ಎಂದಿದೆ.



