ಧಾರವಾಡ: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ, ಮೊಬೈಲ್ಸೇರಿದಂತೆ ಇತ್ಯಾದಿ ಮಾದಕ ವಸ್ತುಗಳನ್ನು ನೀಡಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಮೇಲೆ ಇಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು. ಡಿ.ಸಿ.ಪಿ.ಗಳಾದ ರವೀಶ್, ಮಹಾನಿಂಗ ನಂದಗಾವಿ ಸೇರಿದಂತೆ
ಇನ್ಸ್ಪೆಕ್ಟರ್ಗಳು ಪೊಲೀಸ್ ಸಿಬ್ಬಂದಿ ಧಾರವಾಡ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದರು. ಪೊಲೀಸರ ತಂಡ ಕಾರಾಗೃಹದ ಒಳಗಡೆ ಹೋಗಿದ್ದು ,ಅಲ್ಲಿ ಕೈದಿಗಳಿಗೆ ಯಾವೆಲ್ಲ ಸವಲತ್ತು ನೀಡಲಾಗುತ್ತಿದೆ.,ಕೈದಿಗಳ ಬಳಿ ಮಾದಕ ವಸ್ತುಗಳು ಇವೆಯಾ, ಮೊಬೈಲ್ ಬಳಕೆ ಮಾಡಿತ್ತಿದಾರಾ ಹಾಗೂ ಯಾವ್ಯಾವ ವಸ್ತುಗಳು ಅವರ ಬಳಿ ಇವೆ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ.
“ಕೇಂದ್ರ ಕಾರಾಗ್ರಹದ ಮೇಲೆ ಪೊಲೀಸ್ ದಾಳಿ”



