ಬೆಂಗಳೂರು: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ನೈಜೀರಿಯಾ ಪ್ರಜೆಗಳಿಂದ ಹಲ್ಲೆ ನಡೆಸಿರುತ್ತಾರೆ.ರಾಜಾನುಕುಂಟೆ ಠಾಣಾ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ಘಟನೆ ನಿನ್ನೆ ರಾತ್ರಿ ನಡೆದಿದೆ .ಸಿಸಿಬಿ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ , ಐದಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ನೈಜೀರಿಯಾದವರು ಹಲ್ಲೆ ನಡೆಸಿರುತ್ತಾರೆ .
ಮಾವಳ್ಳಿಪುರದ ಮನೆಯೊಂದರಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಅಧಿಕಾರಿಗಳು ನೈಜೀರಿಯಾ ಪ್ರಜೆಗಳ ಮನೆ ಮೇಲೆ ದಾಳಿ ಮಾಡಿದಾಗ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.ಪೊಲೀಸರಿಗೆ ರಕ್ತ ಬರುವಂತೆ ಆರೋಪಿಗಳು ಹೊಡೆದಿದ್ದಾರೆ. ಈ ಬಗ್ಗೆ ಕೂಡಲೇ 112ಗೆ ಕರೆ ಮಾಡಿದ್ದ ಹಿನ್ನೆಲೆ ಸ್ಥಳಕ್ಕೆ ಬಂದ ರಾಜಾನುಕುಂಟೆ ಹೊಯ್ಸಳ ಸಿಬ್ಬಂದಿ ಆಗಮಿಸಿದಾಗ ಅವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ರಾಜಾನಕುಂಟೆ ಠಾಣೆಯ ಹೊಯ್ಸಳ ಜೀಪ್ ಹಾಗೂ ಸಿಸಿಬಿ ಪೊಲೀಸ್ ಜೀಪ್ ಜಖಂ ಮಾಡಿರುತ್ತಾರೆ.ಗಾಯಾಳು ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಸೇರಿಸಿರುತ್ತಾರೆ ಮತ್ತು ಬೆಂಗಳೂರು ಗ್ರಾಮಂತರ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿರುತಾರೆ.