ಬೆಂಗಳೂರು: ಕೇಂದ್ರ ವಿಭಾಗದ ಪೊಲೀಸರು 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಮಾರು 100 ಜನ ರೌಡಿಗಳ ಮನೆಗಳ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ವಿವೇಕ ನಗರ, ಅಶೋಕನಗರ, ವೈಯಾಲಿಕಾವಲ್ ಸೇರಿದಂತೆ 12 ಪೊಲಿಸ್ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಪೊಲೀಸರು ದಾಳಿ ವೇಳೆಯಲ್ಲಿ ಭಾಗಿಯಾಗಿದ್ದಾರೆ.
ಕೆಲ ರೌಡಿಗಳು ಹಲವು ಕೇಸುಗಳಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಇರುವುದು ಸಹ ದಾಳಿ ವೇಳೆ ಬೆಳಕಿಗೆ ಬಂದಿರುತ್ತದೆ.
ಇದೇ ಸಂದರ್ಭದಲ್ಲಿ ರೌಡಿಗಳ ಮನೆ ಶೋಧ ಕಾರ್ಯ ನಡೆಸಿದಾಗ ಮನೆಗಳಲ್ಲಿ ಕೆಲ ವ್ಯಕ್ತಿಗಳ ವ್ಯಾಜ್ಯಕ್ಕೆ ಸಂಬಂಧಪಟ್ಟಂತ ದಾಖಲೆ ಪತ್ರಗಳು ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೇಕಣ್ಣನವರ್ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿರುತ್ತದೆ.