ಬೇಲೂರು: ಸೆಪ್ಟೆಂಬರ್ ೨೬-೯-೨೦೨೫ ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ರೇವಣ್ಣ ಹಾಗು ಪಿಎಸ್ಐ ಎಸ್ ಜಿ ಪಾಟೀಲ್ ನೇತೃತ್ವದಲ್ಲಿ ಚಿಕ್ಕಮಗಳೂರು ಗೆ ವಸೀಂ ಎಂಬುವವರಿಗೆ ಸೇರಿದ ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೩೪ ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಅದನ್ನು ಪೊಲೀಸ್ ಇಲಾಖೆ ವತಿಯಿಂದ ಆದಾಯ ತೆರಿಗೆ ಇಲಾಖೆ ಗಮನಕ್ಕೆ ತಂದು ಮಾಹಿತಿ ಪಡೆಯಲು ಸೂಚನೆ ನೀಡಲಾಗಿತ್ತು.ಅಂದಿನಿAದ ಇಂದಿನವರೆಗು ಯಾವುದೇ ದಾಖಲಾತಿಗಳನ್ನು ನೀಡದೆ ಹಣ ತಮ್ಮದೆ ಎಂದು ಹೇಳುತ್ತಿದ್ದ ಅವರು ಸುಮಾರು ೨೦ ದಿನಗಳ ಕಳೆದರು ಸಹ ಯಾವುದೇ ಮಾಹಿತಿ ಹಾಗು ಯಾವುದೇ ಹಣದ ದಾಖಲಾತಿ ನೀಡದ ಹಿನ್ನಲೆಯಲ್ಲಿ ಮೈಸೂರು ವಿಭಾಗೀಯ ನಿರ್ದೇಶಕರಾದ ಐಟಿ ವೆಂಕಟೇಶನ್ ಅವರ ತಂಡದವರಿಗೆ ಇಂದು ಪೊಲೀಸ್ ಇಲಾಖೆಯಲ್ಲಿ ಅದನ್ನು ಒಪ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ರೇವಣ್ಣ, ಪಿಎಸ್ಐ ಎಸ್ ಜಿ ಪಾಟೀಲ್, ಇಲಾಖೆ ಸಿಬ್ಬಂದಿಗಳಾದ ರಮೇಶ್ ದೇವರಾಜು, ಅಣ್ಣಪ್ಪ, ಉಮೇಶ್ ಸತೀಶ್, ಸೇರಿದಂತೆ ಐಟಿ ಇಲಾಖೆ ಸಿಬ್ಬಂದಿಗಳು ಹಾಗು ಇಲಾಖೆ ಅಧಿಕಾರಿಗಳು ಇದ್ದರು.
ಹೊಸ ಅಭಿಂi
“ದಾಖಲೆ ಇಲ್ಲದ ಸುಮಾರು ೩೪ ಲಕ್ಷ ಹಣ ವಶಪಡಿಸಿಕೊಂಡ ಪೊಲೀಸರು”



