ಬೆಂಗಳೂರು: ಮಾಜಿ ಸಚಿವ ಅರಗಜ್ಞಾನೇಂದ್ರ ಅವರು ಗೃಹಸಚಿವರಾಗಿದ್ದಗಿನಿಂದ ಈ ಪರಿಸ್ಥಿತಿ ಏನೂ ಬದಲಾಗಿಲ್ಲ ಎಂದು ವಿಧಾನಸಭೆಯಲ್ಲಿ ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿಯ ಅರಗಜ್ಞಾನೇಂದ್ರ ಅವರು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪರಮೇಶ್ವರ್ ಕಳ್ಳತನ ಹೆಚ್ಚಾಗಿರಬಹುದು ಅಥವಾ ಕಡಿಮೆಯಾಗಿರಬಹುದು. ವ್ಯವಸ್ಥೆ ಬದಲಾಗಿಲ್ಲ ಎಂದಿದ್ದಾರೆ.
ಒಂದು ವರ್ಷದಲ್ಲಿ ೧೪ ಕಳ್ಳತನ ಪ್ರಕರಣಗಳು ನಡೆದಿವೆ, ಇದು ನನ್ನ ಪ್ರಕಾರ ಕಡಿಮೆಯೇ. ಶಿವಮೊಗ್ಗದಲ್ಲಿ ೧೬ ಸಾವಿರ, ತೀರ್ಥಹಳ್ಳಿಯಲ್ಲಿ ೩ ಸಾವಿರ ಸಿಸಿಟಿವಿಗಳಿವೆ
ಕ್ರಮವಹಿಸುವಲ್ಲಿ ಯಾವುದೇ ನಿರ್ಲಕ್ಷ್ಯ, ವಿಳಂಬ ಆಗಿಲ್ಲ. ಕಳ್ಳತನ ತಡೆಯುವಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಂಡಿದ್ದೇವೆ. ಪೊಲೀಸರು ಏನೂ ಮಾಡೇ ಇಲ್ಲ ಅನ್ನೋದು ಸರಿಯಲ್ಲ. ಕಳ್ಳತನ ಆಗದೇ ಇರಲು ಏನೆಲ್ಲ ಮಾಡಬೇಕೋ ಮಾಡುತ್ತೇವೆ. ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲ ಎಂದು ಉತ್ತರಿಸಿದ್ದಾರೆ.
ಮಲೆನಾಡು ಪೊಲೀಸ್ ಸ್ಟೇಷನ್ನಲ್ಲಿ ಬಹಳಷ್ಟು ಖಾಲಿ ಹುದ್ದೆಗಳಿವೆ ಎಂದು ಮತ್ತೊಮ್ಮೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಉಪಪ್ರಶ್ನಿಸಿ, ಆಗುಂಬೆಯಲ್ಲಿ ಕೂಡ ಪೊಲೀಸ್ ಠಾಣೆ ಇಲ್ಲ. ಕ್ರೈಂ ಬ್ರಾಂಚ್ ಕೂಡ ಗಟ್ಟಿಗೊಳಿಸಬೇಕು. ನಮಗೆ ಗನ್ ಲೈಸೆನ್ಸ್ ಆದ್ಯತೆ ಇದೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಚನ್ನಬಸಪ್ಪ ಚಡ್ಡಿ ಗ್ಯಾಂಗ್ ಅಂತ ಇದೆ, ಆ ಗ್ಯಾಂಗ್
ಡಾ.ಜಿ. ವೈ. ಪದ್ಮನಾಗರಾಜು
ಪೊಲೀಸ್ ಪರಿಸ್ಥಿತಿ ಬದಲಾಗಿಲ್ಲ: ಪರಮೇಶ್ವರ್



