ರಾಮನಗರ : ನಗರದಲ್ಲಿ ನಡೆದ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮತ್ತು ಪೋಲೀಸ್ ಉಪಾದೀಕ್ಷಕ ಬಿಎನ್.ಶ್ರೀನಿವಾಸ್, ವೃತ್ತ ಆರಕ್ಷಕ ನಿರೀಕ್ಷಕರಾದ ಕೃಷ್ಣ, ರಮೇಶ್ ಅವರುಗಳನ್ನು ಯುವ ಕಾಂಗ್ರೆಸ್ ನಗರ ಘಟಕದ ಅದ್ಯಕ್ಷ ಮುಷೀರ್ ನೇತೃತ್ವದಲ್ಲಿ ಪದಾಧಿಕಾರಿಗಳು ಅಭಿನಂದಿಸಿದರು.
ಈ ವೇಳೆ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕರ್ಯರ್ಶಿ ವೆಂಕಟೇಶ್, ನಗರ ಬ್ಲಾಕ್ ಅಧ್ಯಕ್ಷ ಮುಷೀರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಭೂಷಣ್, ಯುವ ಮುಖಂಡರಾದ ಚೇತನ್ , ಕೇತೋಹಳ್ಳಿ ದರ್ಗಾ ಪ್ರಸಾದ್, ನವೀನ್, ಲೋಕೇಶ್, ಜಯಂತ್, ಮತ್ತಿತರರು ಇದ್ದರು.