ಯಲಹಂಕ: ದಿನಾಂಕ 23-3-2024 ಶನಿವಾರದಂದು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ಜರುಗಿತು.ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದ ಯಲಹಂಕ ಉಪನಗರ ಹಾಗೂ ಸುತ್ತಮುತ್ತಲಿನ ವಾಸ ಪ್ರದೇಶಗಳ ನಾಗರಿಕರ ಬಂಧುಗಳು ಆಗಮಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ನೂತನ ಪೊಲೀಸ್ ಇನ್ಸ್ಪೆಕ್ಟರ್ ಆದ ಸುಧಾಕರ್ ರೆಡ್ಡಿ ಅವರಲ್ಲಿ ತೋಡಿಕೊಂಡರು.
ನಾಗರಿಕರ ಕುಂದು ಕೊರತೆಗಳನ್ನು ಆಲಿಸಿದ ಇನ್ಸ್ಪೆಕ್ಟರ್ ರವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ನಾಗರಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನೆಮ್ಮದಿಯಿಂದಿರಬೇಕೆಂದು ಸೂಕ್ತ ಸಲಹೆಗಳನ್ನು ನೀಡಿದರು. ತಮ್ಮ ತಮ್ಮ ಮೈನರ್ ಮಕ್ಕಳು ಪ್ರೇಮದ ಬಲೆಗೆ ಸಿಲುಕಿ ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚಿವೆ. ಈ ಬಗ್ಗೆ ಎಚ್ಚರ ವಹಿಸಿರಿ ಎಂದರು.
ನಿಮ್ಮ ನೆರವಿಗಾಗಿ ಪೊಲೀಸ್ ಠಾಣೆ ಅಧಿಕಾರಿಯಾದ ನಾವು ಮತ್ತು ನಮ್ಮ ಸಿಬ್ಬಂದಿಗಳು ಸದಾ ಸಿದ್ಧರಿರುತ್ತೇವೆ ಎಂದರು ಮತ್ತು ಪೊಲೀಸ್ ಠಾಣೆಯ ನಂಬರ್ ನೀಡಿ, ನಿಮಗೆ ಸಂಶಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಬಗ್ಗೆ ಮಾಹಿತಿ ನೀಡಿ ಹಾಗೂ ನಿಮ್ಮ ಅಕ್ಕ ಪಕ್ಕ ಜರಗುವ ಘಟನೆಗಳನ್ನು ನಮ್ಮ ಗಮನಕ್ಕೆ ತಂದು ನಿವಾಸಿಗಳು ನೆಮ್ಮದಿಯಿಂದಿರಲು ಸಹಕರಿಸಿ ಎಂದು ಮನವಿ ಮಾಡಿದರು.