ನೆಲಮಂಗಲ: ಪೋಲಿಯೊದಂತಹ ಮಹಾಮಾರಿ ಯಿಂದ ಮಗುವನ್ನು ರಕ್ಷಿಸುವುದು ಹಾಗೂ ರೋಗ ಮುಕ್ತ ಸಮಾಜಕ್ಕೆ ಎಲ್ಲರ ಸಹಕಾರ ಮುಖ್ಯ ಪೋಲಿಯೊ ಹನಿ ಹಾಕುವ ಮೂಲಕ ಭಯಾನಕವಾದ ಪೋಲಿಯೋ ರೋಗವನ್ನು ಹೊಡೆದೋಡಿಸುವ ಕಾರ್ಯ ಅಮೋಘವಾದದ್ದು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ರೋ.ಎಂ.ಟಿ.ನವೀನ್ಕುಮಾರ್ ಹೇಳಿದರು.
ನಗರದ ಬಸವಣ್ಣ ದೇವರ ಮಠದ ಆಯೋಜಿಸಿದ್ದ ಪಲ್ಸ್ ಪೊಲಿಯೋ ಉಧ್ಘಾಟನಾ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆಹಾಕುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಆದರಿಂದ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಪಲ್ಸ್ ಪೋಲಿಯೋ ದಿನದ ಅಂಗವಾಗಿ ಮಕ್ಕಳಿಗೆ ಪಲ್ಸ್ ಮಾರಕ ರೋಗವನ್ನು ತಪ್ಪಿಸುವ ಮಹತ್ಕಾರ್ಯದಲ್ಲಿ ನಮ್ಮ ರೋಟರಿ ಸಂಸ್ಥೆಯು ಪ್ರಮುಖ ಪಾತ್ರವನ್ನು ನಿರ್ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಛರ್ಮನ್ ರೋ.ಚಂದ್ರಕುಮಾರ್, ರೋ.ಮುರುಳಿ, ರೋ.ನಾಗರಾಜ್, ಭಾವಿ ರೋಟರಿ ಅಧ್ಯಕ್ಷ ರೋ.ಸುರೇಂದ್ರನಾಥ್, ರೋ.ಸೋಮಶೇಖರ್, ರೋ.ಮಾರಯ್ಯ, ರೋ.ಮಂಜುನಾಥ್, ತನುಜ, ಶಾರದ, ಗುರುಪ್ರಸಾದ್, ವೀಣಾದಯಾನಂದ್, ಆಭಿಷೇಕ್, ತಾಲ್ಲೂಕು ಆರೋಗ್ಯಾಧಿಕಾರಿ ಹೇಮಾವತಿ, ರಾಜಶೇಖರ್, ಪೃಥ್ವಿರಾಜ್, ಜಯಂತ್, ಚಿರಾಗ್, ಚಿರಂಜೀವಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.