ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಣವುಳ್ಳ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹೃದಯವಂತ ಜೆಡಿಎಸ್ ಅಭ್ಯರ್ಥಿ ನಡುವೆ ಕದನ ನಡೆಯುತ್ತಿದ್ದು ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ಮತದಾರರೇ ತೀರ್ಮಾನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾಯಿತರಾದರೆ ಕೇಂದ್ರ ಸಚಿವರಾಗಿ ಆ ಮೂಲಕ ರಾಜ್ಯದ ಅಭಿವೃದ್ದಿಗೆ ಅನುಕೂಲವಾಗುತ್ತದೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ಚಂದ್ರು ಗೆದ್ದರೆ ದೊಡ್ಡ ಗುತ್ತಿಗೆದಾರರಾಗುತ್ತಾರೆ ಹಾಗಾಗಿ ಮತದಾರರು ಇದನ್ನು ಮನಗಂಡು ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಈಗ ರಾಜಕೀಯ ಧೃವೀಕರಣ ನಡೆಯುತ್ತಿದ್ದು ಇದು ಮುಂದೆ ಮತ್ತಷ್ಟು ಬದಲಾವಣೆಗೆ ನಾಂದಿಯಾಗುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಂಘಟಿತ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿ ಭವಿಷ್ಯದಲ್ಲಿ ದೇಶ ಮತ್ತು ರಾಜ್ಯಕ್ಕೆ ಒಳ್ಳೆಯದಾಗುವಂತೆ ಜನರು ನೋಡಿಕೊಳ್ಳಬೇಕು ಎಂದರು.
ಮಹಿಳೆಯರ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಮತ್ತು ಉಪ-ಮುಖ್ಯಮಂತ್ರಿಗಳು ಅನಗತ್ಯ ಆರೋಪ ಮಾಡುತ್ತಿದ್ದು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಆದರೆ ನಿಮ್ಮ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸುರ್ಜೇವಾಲ ದೇಶದ ಹಿರಿಯ ಕಲಾವಿದೆ ಹೇಮಮಾಲಿನಿ ಅವರ ಬಗ್ಗೆ ಕೀಳಾಗಿ ಮಾತನಾಡಿ ಆಯೋಗದಿಂದ ಎರಡು ದಿನ ಚುನಾವಣಾ ಪ್ರಚಾರ ಬಹಿಸ್ಕಾರಕ್ಕೆ ಒಳಗಾಗಿರುವುದಕ್ಕೆ ನೀವು ಉತ್ತರಿಸಬೇಕು ಎಂದರು.