ಸುಧೀರ್ ಅತ್ತಾವರ್ ನಿರ್ದೇಶನದ ಹಾಗೂ ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹು ನಿರೀಕ್ಷಿತ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್
ಅಡಿಯ “ಕೊರಗಜ್ಜ” ಚಿತ್ರದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು.
ದಕ್ಷಿಣ ಕನ್ನಡದ ವಾದ್ಯ ಹಿಮ್ಮೇಳ ಹಾಗೂ ಉಡುಪಿಯ ಮಹಿಳಾ ತಂಡದವರ ಹುಲಿ ನೃತ್ಯದ ಮೆರವಣಿಗೆಯಲ್ಲಿ ಸಾಗಿಬಂದ “ಕೊರಗಜ್ಜ” ನ ಎರಡು ಕಟೌಟ್ ಗಳು
ಡೊಳ್ಳು, ಕೊಂಬು-ಕಹಳೆ, ಕೊಳಲು, ತಾಸೆ,ತಾಳಗಳ ವಾದ್ಯಮೇಳದ ಹಿನ್ನೆಯಲ್ಲಿ ಹುಲಿವೇಶದ ಅಬ್ಬರದ ನ್ರತ್ಯದ ನಡುವೆ ಫಸ್ಟ್ ಲುಕ್ ಅನಾವರಣ ಗೊಂಡಿರುವುದು ಅತ್ಯಂತ ವಿಶೇಷವಾಗಿತ್ತು.
ಸಮಾರAಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವೆ ಮೋಟಮ್ಮ, ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷಿ÷್ಮ ಸಿಂಗ್, ನಿರ್ದೇಶಕ, ನಿರ್ಮಾಪಕ, ಸಿನಿಮಾದ ನಟ ನಟಿಯರೆಲ್ಲ ಕಟೌಟ್ ಗೆ ಪುಷ್ಪಾರ್ಚನೆ ಗೊಳಿಸಿರುವುದು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ನೀಡಿತು. ಮೂರು ವರ್ಷಗಳ ಹಿಂದೆ ಆರಂಭವಾದ ಸಿನಿಮಾ ಈಗ ಅನೇಕ ಅಡೆತಡೆಗಳನ್ನು ದಾಟಿ ಬಿಡುಗಡೆಯ ಹಂತ ತಲುಪಿದೆ. ಇದರ ಪೂರ್ವಭಾವಿಯಾಗಿ ಇಂದು ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ನನಗೆ ತಿಳಿದ ಹಾಗೆ ದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ತ್ರಿಡಿ ಪೋಸ್ಟರ್ ಮಾಡಿರುವುದು.
ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಅಂದುಕೊAಡ ಹಾಗೆ ಬಂದಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮತ್ತು
ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತಮ್ಮ ಕಾರ್ಯ ನಿರ್ವಹಿಸಿರುತ್ತಾರೆ. ಚಿತ್ರತಂಡದ ಸಹಕಾರ ಅಪಾರ. ಒಟ್ಟು ಆರು ಭಾಷೆಗಳಲ್ಲಿ ಮೂಡಿಬಂದಿರುವ ನಮ್ಮ ಚಿತ್ರದಲ್ಲಿ ಒಟ್ಟು ೩೧ ಹಾಡುಗಳಿದೆ(ಆರು ಭಾಷೆಗಳಿಂದ). ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ದ ಗಾಯಕ – ಗಾಯಕಿಯರು ಈ ಹಾಡನ್ನು ಹಾಡಿದ್ದಾರೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದರು.
ಇದು ನಾನು ಜೈ ಜಗದೀಶ್ ಆರಂಭಿಸಿದ ಸಿನಿಮಾ.ಸುಮಾರು ೨೫ ಸಿನಿಮಾ ನಿರ್ಮಾಣ ಮಾಡಿರುವ ನಮಗೆ ಈ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗದೆ,ಈ ಪ್ರೋಜೆಕ್ಟ್ ನಿಂದ ಹಿAದೆ ಸರಿದೆವು. ಆದರೆ ಈಗ ಅದು ಸುಧೀರ್ ಅತ್ತಾವರ್ ಗೆ ಇದು ಒಲಿದಿದೆ. ವಿಭಿನ್ನವಾಗಿ ಅದ್ದೂರಿ ಫಸ್ಟ್ ಲುಕ್ ರಿಲೀಸ್ ನೋಡಿ ಈ ಸಿನಿಮಾ ಯಾವ ಮಟ್ಟದಲ್ಲಿ ಮೂಡಿಬಂದಿರಬಹುದೆನ್ಬುವುದನ್ನು ಊಹಿಸಬಹುದು ಎಂದು ವಿಜಯಲಕ್ಷಿ÷್ಮ ತಿಳಿಸಿದರು.