ಹುಬ್ಬಳ್ಳಿ. ಅನ್ಯ ಧರ್ಮದ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿ ಸಿದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರು ಯುವಕ ನೋರ್ವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೈಯದ್ ರಹನಾ ಬೆಟಗೇರಿ ಎಂಬಾತ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಲವ್ ಜಿಹಾದ್ ಉದ್ದೇಶದಿಂದ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಿಹಾರ ಮೂಲದ ೧೭ ವರ್ಷದ ಯುವತಿಯನ್ನು ಪುಸಲಾಯಿಸಿದ ಯುವಕ, ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದ. ಇದನ್ನು ಗಮನಿಸಿದ್ದ ನಾಗರೀಕರು ಯುವಕನನ್ನು ಹಿಡಿದು ಪ್ರಶ್ನಿಸಿದ್ದು. ಮೊದಲು ತನ್ನ ಹೆಸರು ರಮೇಶ ಎಂದು ಹೇಳಿದ್ದ ಯುವಕ, ಜಾರಿಕೊಳ್ಳಲು ಯತ್ನಿಸಿದ್ದ. ಆದರೆ ಆತನ ಮೊಬೈಲ್ ಚೆಕ್ ಮಾಡಿದಾಗ ಯುವತಿಯನ ಜೊತೆಗಿನ ಅಶ್ಲೀಲ ವೀಡಿಯೋ, ಫೋಟೋಗಳು ಪತ್ತೆಯಾಗಿವೆ. ಬೇರೆ ಬೇರೆ ಯುವತಿಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದ ಭೂಪ.