‘ಸಲಾರ್’ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಫ್ಯಾನ್ಸ್ ‘ಕಲ್ಕಿ 2898 ಎಡಿ’ ಮೇಲೆ ಕಣ್ಣಿಟ್ಟಿದ್ದಾರೆ. ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅಂತಹ ದಿಗ್ಗಜರು ನಟಿಸಿರುವ ಬಹುಕೋಟಿ ವೆಚ್ಚದ ಈ ಸಿನಿಮಾ ಕಳೆದ ಕೆಲವು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇತ್ತು. ಕೊನೆಗೂ ಈ ಸಿನಿಮಾ ಮುಗಿದಿದ್ದು, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಟಾಲಿವುಡ್ನ ವೈಜಯಂತಿ ಮೂವೀಸ್ ಬ್ಯಾನರ್ನ ಪ್ರತಿಷ್ಠಿತ ಸಿನಿಮಾವಿದು. ‘ಮಹಾನಟಿ’ ಸಿನಿಮಾದ ನಿರ್ದೇಶಕ ನಾಗ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ತಂಡ ನಿಧಾನವಾಗಿ ಪ್ರಚಾರವನ್ನು ಆರಂಭಿಸಿದೆ. ಅಮಿತಾಭ್ ಬಚ್ಚನ್ ನಟಿಸಿರುವ ಅಶ್ವತ್ಥಾಮ ಪಾತ್ರದ ಲುಕ್ ಅನ್ನು ರಿಲೀಸ್ ಮಾಡುವ ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದೆ. ಪ್ರಭಾಸ್ ಅಭಿಮಾನಿಗಳು ‘ಸಲಾರ್’ ಸಿನಿಮಾ ಗೆದ್ದ ಖುಷಿಯಲ್ಲಿ ತೇಲಾಡುತ್ತಿರುವಾಗಲೇ ‘ಕಲ್ಕಿ 2828 AD ರಿಲೀಸ್ ಅನ್ನು ಅನೌನ್ಸ್ ಡೇಟ್ ಅನ್ನು ನಿರ್ಧರಿಸಿದೆ.
‘ಕಲ್ಕಿ 2828 AD’ ತೆಲುಗು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಐದು ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಮೆಗಾ ರಿಲೀಸ್ಗೆ ಪ್ಲಾನ್ ಮಾಡಿಕೊಳ್ಳುತ್ತಿದೆ. ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಮಾಡಬೇಕಿತ್ತು.
‘ಕಲ್ಕಿ’ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ಫ್ಯಾನ್ಸ್ಗೆ ಪ್ರತಿಬಾರಿ ನಿರಾಸೆ ಆಗಿತ್ತು. ಲೋಕಸಭೆ ಹಾಗೂ ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಕಲ್ಕಿ 2828 AD’ಬಿಡುಗಡೆ ವಿಳಂಬ ಆಗಿದೆ ಎನ್ನಲಾಗಿದೆ. ಕೊನೆಗೂ ರಿಲೀಸ್ ಡೇಟ್ ಅನ್ನು ಫಿಕ್ಸ್ ಮಾಡಿದ್ದು, ಜೂನ್ 27ಕ್ಕೆ ವಿಶ್ವದಾದ್ಯಂತ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.
ಈ ಕಾರಣಕ್ಕೆ ಸಿನಿಮಾ ತಂಡ ನಿಧಾನವಾಗಿ ಪ್ರಚಾರ ಆರಂಭಿಸಿದೆ.2ನೇ ಸಿನಿಮಾ ಗೆದ್ದಾಗ ಏನಂದಿದ್ರು? ಯಾವುದೇ ತೆಲುಗು ಸಿನಿಮಾ ರಿಲೀಸ್ ಆದರೂ, ಒಂದು ದಿನ ಮುಂಚಿತವಾಗಿ ಅಮೆರಿಕದಲ್ಲಿ ಪ್ರೀಮಿಯರ್ ನಡೆಯುತ್ತೆ. ‘ಕಲ್ಕಿ 2828 AD’ ಬಹುಕೋಟಿ ವೆಚ್ಚದ ಸಿನಿಮಾ ಆಗಿರುವುದರಿಂದ ಒಂದು ದಿನ ಮುಂಚಿತವಾಗಿ, ಅಂದರೆ, ಜೂನ್ 26ರಂದು ಅಮೆರಿಕದಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಐದು ಭಾಷೆಗಳಲ್ಲೂ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡಲಿದೆ ಚಿತ್ರತಂಡ. ಶೀಘ್ರದಲ್ಲಿಯೇ ಆ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.
ಟಾಲಿವುಡ್ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ ಪ್ರೀ ರಿಲೀಸ್ ಬ್ಯುಸಿನೆಸ್ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಈ ಬೆನ್ನಲ್ಲೇ ‘ಕಲ್ಕಿ 2828 AD ಬ್ಯುಸಿನೆಸ್ ಮೇಲೂ ಕಣ್ಣಿಡಲಾಗಿದೆ. ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅಂತ ದಿಗ್ಗಜರು ನಟಿಸಿರುವ ಸಿನಿಮಾ ಈಗಾಗಲೇ ಒಟಿಟಿ ಹಾಗೂ ಸ್ಯಾಟಲೈಟ್ ಬ್ಯುಸಿನೆಸ್ ಮಾಡಿದ್ದು, ಥಿಯೇಟ್ರಿಕಲ್ ರಿಲೀಸ್ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.