ಬೆಂಗಳೂರಿನ ಶ್ರೀಕೃಷ್ಣ ಪದವಿ ಕಾಲೇಜು ಹಾಗೂ ಯುವ ಬಲ ಜಾಗೃತಿ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ವ್ಯಸನ ಮುಕ್ತ ಯುವಕರ ಅಭಿಯಾನ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಕುಮಾರಿ ಪ್ರಾಚಿಗೌಡರು ಕಾಲೇಜಿನ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ನಮ್ಮ ದೇಶ ಪ್ರಗತಿ ಪಥದತ್ತಾ ಸಾಗುತ್ತಿರುವ ಈ ಸಮಯದಲ್ಲಿ ಯುವಕರ ಪಾತ್ರ ಬಹು ಮುಖ್ಯವಾದುದ್ದು.
ಯುವ ಜನರು ಇಂದು ತಮ್ಮ ತಾರಣ್ಯ ಜೀವನದಲ್ಲಿ ಅನೇಕ ದುಶ್ಚಟಗಳಿಗೆ ಬಲಿಯಾಗಿ ಕಲಿಯುವ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದ್ದರಿಂದ ನಾವುಗಳು ವ್ಯಸನ ಮುಕ್ತರಾಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಂಡನ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಮಾತನಾಡಿ ವ್ಯಸನಗಳು ಮನುಷ್ಯನ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಮತ್ತೋರ್ವ ಮುಖ್ಯ ಅಥಿತಿಯಾಗಿದ್ದ ವಿ ಎಸ್ ಉಗ್ರಪ್ಪ ಮಾಜಿ ಲೋಕ ಸಭಾ ಸದಸ್ಯರು ಮಾತನಾಡುತ್ತಾ ವಿದ್ಯಾರ್ಥಿಗಳು ಸುಭದ್ರ ಭಾರತದ ಬುನಾದಿಗಳು ಅವರುಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಮಹಮ್ಮದ್ ರಫೀ ಪಾಶಾ ಅವರು ಯುವ ಶಕ್ತಿ ಇಂದು ಬೇರೆ ದಿಕ್ಕಿನಲ್ಲಿ ಸಾಗುತ್ತದೆ.
ಅವರಿಗೆ ಸರಿ ದಾರಿಗೆ ತರುವ ಕೆಲಸ ಭರದಿಂದ ಸಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಸಮೂಹ ಸಂಸ್ಥೆಯ ಅದ್ಯಕ್ಷರಾದ ಡಾ. ಎಂ ರುಕ್ಮಾಂಗದ ನಾಯ್ಡು, ಶೈಕ್ಷಣಿಕ ನಿರ್ದೇಶಕರಾದ ಎಸ್ ಪಿ ಮನೋಹರ, ಪ್ರಾಚಾರ್ಯರಾದ ಡಾ. ಎನ್ ಉಷಾ ಕುಮಾರಿ ಹಾಗೂ ಎನ್ ಎಸ್ ಎಸ್ ಘಟಕದ ಕಾರ್ಯದರ್ಶಿ ಶ್ರೀ ಅವಿನಾಶ್ ಉಪಸ್ಥಿತಿ ಇದ್ದರು.