ಕನಕಪುರ: ಮಾತೃಭಾಷೆಯಲ್ಲಿರುವ ಪುಸ್ತಕಗಳನ್ನು ಪ್ರತಿ ಯೋಬ್ಬರು ಅಧ್ಯಯನ ಮಾಡಿ ಕಾವ್ಯಗಳಲ್ಲಿ ಸಿಗುವ ಧನಾತ್ಮಕ ಅಂಶಗಳನ್ನು ತೆಗೆದುಕೊಳ್ಳುವಂತೆ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ರಾವ್ ತಿಳಿಸಿದರು.
ನಗರದ ಕೋಟೆ ಶ್ರೀರಾಮಮಂದಿರದಲ್ಲಿ ತ್ರಿಮತಸ್ಥ ಬ್ರಾಹ್ಮಣ ಸಂಘ ಕನಕಪುರ ಘಟಕ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ನಡೆದ ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವ, ಮಹಾಬ್ರಾಹ್ಮಣ ಪುಸ್ತಕದ ಚರ್ಚೆ ಮತ್ತು ಸಂವಾದದ ಮಂಥನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ಕನ್ನಡ ಪುಸ್ತಕಗಳ ಅಧ್ನಯಯನ ವನ್ನು ಚೆನ್ನಾಗಿ ಮಾಡಬೇಕು, ಪಂಪ,ರನ್ನ ರಾಘವಾಂಕ, ಕುಮಾರವ್ಯಾಸರ ಪದ್ಯಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ ಕೊಟ್ಟ ಅವರು ಇಂತಹ ಸಮೃದ್ಧವಾದ ಭಾಷೆ ಮತ್ತೊಂದು ಇಲ್ಲ, ಅದು ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಇಂತಹ ವೈಶಿಷ್ಟ್ಯಗಳನ್ನು ಕಾಣಬಹುದು, ಕಾವ್ಯಗಳಲ್ಲಿ ಸಿಗುವ ಧನಾತ್ಮಕ ಅಂಶ ಗಳನ್ನು ನಾವು ತೆಗೆದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಭೇಕಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಧನಂಜಯ ಮಾತನಾಡಿ ಆದಿಕವಿ ವಾಲ್ಮೀಕಿಯ ರಾಮಾಯಣದಲ್ಲಿನ ಪಾತ್ರಗಳ ಮೂಲಕ ನಾವು ಕಲಿಯಬೇಕಾದ ಸಾಕಷ್ಟು ಗುಣಗಳಿದ್ದು ಶ್ರೀರಾಮ ಯಾಕೆ ಇಂದು ಕೂಡ ಪ್ರಸ್ತುತರಾಗಿದ್ದಾರೆ, ರಾವಣನ ಹತ್ತು ತಲೆಗಳ ಸಂಕೇತವೇನು, ಆದಿಕಾವ್ಯಗಳ ಪ್ರಸ್ತುತತೆ ಏನು ಎಂಬುದರ ಬಗ್ಗೆ ಸಭೆಯಲ್ಲಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಾಟಾಕಗಾರ ದೇವುಡು ನರಸಿಂಹ ಶಾಸ್ತ್ರಿ ಅವರು ಬರೆದಿರುವ ಮಹಾಬ್ರಾಹ್ಮಣ ಪೌರಾಣಿಕ ಕಾದಂಬರಿ ಕುರಿತು ಮಂಥನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಏರ್ಪಡಿಸಿತ್ತು,ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿಇಒ ಕಚೇರಿ ಅಧೀಕ್ಷಕ ಎಂ.ಸಿ.ನಾಗರಾಜು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಸಂಚಾಲಕಿ ವಿನುತ, ಉಪನ್ಯಾಸಕ ನಾಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನೇರ ಪ್ರಭಾಕರ್, ಉಪನ್ಯಾಸಕ ವೇಣುಗೋಪಾಲ್, ನಾಗರಾಜ್ ರಾವ್ ಗುಡಿಬಂಡೆ, ಚಂದ್ರಾವತಿ, ವೆಂಕಟೇಶ್.ಕೆ.ಎನ್, ಭುವನೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.