This is the title of the web page
This is the title of the web page

ಪ್ರದೀಪ್ ಈಶ್ವರ್ ಜಯ ಖಂಡಿತ: ಸಮೃದ್ಧಿ ಸಮಗ್ರ ಬಲಿಜ ವೇದಿಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರದೀಪ್ ಈಶ್ವರರಿಗೆ ಈಗಾಗಲೇ ಒಂದು ಸುತ್ತು ಪ್ರಮುಖ ನಾಯಕರೊಡನೆ ಚುನಾವಣಾ ಪ್ರಚಾರ ಮುಗಿಸಿದ ಮಾಜಿ ಸಚಿವರಾದ ಎಂ.ಆರ್ ಸೀತಾರಾಮ್ ಅವರು ವಿಶೇಷವಾಗಿ ಕಾಳಜಿ ವಹಿಸಿ ಅವರ ನಾಯಕತ್ವದಲ್ಲಿ ಪ್ರಚಾರ ನಡೆಸಿದ್ದಾರೆ.

ಮಾಜಿ ಸಚಿವ ಜಮೀರ್ ಅಹ್ಮದ್.ಮಾಜಿ ಸಚಿವ ನಸೀರ್ ಅಹಮದ್. ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ( ಐ) ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್, ಗೌರಿಬಿದನೂರು ಮಾಜಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ, ಚಿಕ್ಕಬಳ್ಳಾಪುರ ಹಿರಿಯ ಕಾಂಗ್ರೆಸ್ ಮುಖಂಡರು ಯಲವಳ್ಳಿ ರಮೇಶ್, ಮಂಚೇನಳ್ಳಿ ಪ್ರಕಾಶ್ ಹಾಗೂ ಬಿಎಸ್‍ಪಿ ಪಕ್ಷದ ಮುಖಂಡರಾದ ರಾಮಕೃಷ್ಣಪ್ಪ, ಪೆದ್ದನ್ನ, ಕುರುಬ ಸಮಾಜದ ಮುಖಂಡರು ಪ್ರಚಾರ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ಬಲಿಜ ಮುಖಂಡರಾದ ರಾಮಚಂದ್ರ, ಡಾ.ಪಿಎಸ್ ಮಂಜುನಾಥ್ ಕೆಎಸ್‍ಆರ್ಟಿಸಿ ಆನಂದ್, ಪಿಎಂ ರಘು, ತರಕಾರಿ ವೆಂಕಟಪ್ಪನವರ ಮಗ ಲಕ್ಷ್ಮಿಪತಿ, ನಾಗಭೂಷಣ್. ರಮೇಶ್ ಬಾಬು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪೆರೆಸಂದ್ರದಲ್ಲಿ ಬೈಕ್ ರ್ಯಾಲಿ ಕೈಗೊಂಡು ರಕ್ಷ ರಾಮಯ್ಯ ರವರ ನಿರ್ದೇಶನ ಮೇಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಮತದಾರರ ಗಮನ ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಪ್ರೇರೇಪಿಸಿ ಮತ ನೀಡಲು ಚುನಾವಣಾ ಪ್ರಚಾರ ಕಾರ್ಯಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ಸಿನ ಸುರೇಶ್ ಹಾಗೂ ಮಹಿಳಾ ಕಾರ್ಯಕರ್ತರು ಇನ್ನು ಮುಂತಾದ ಸ್ಥಳೀಯ ಮುಖಂಡರಿಂದ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಯುತ್ತಿದ್ದು. ಪ್ರದೀಪ್ ಈಶ್ವರರ ಹಿಂದೆ 1000 ಕ್ಕು ಹೆಚ್ಚು ಪ್ರದೀಪ್ ಈಶ್ವರರ ಅಭಿಮಾನಿ ಯುವ ಬಳಗ ಪಡೆ ಕಾರ್ಯಕರ್ತರು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಕರ್ನಾಟಕ ಸಮೃದ್ಧಿ ಸಮಗ್ರ ಬಲಿಜ ವೇದಿಕೆಯ ಗೌರವಾಧ್ಯಕ್ಷ ಅಕ್ಕಿ ರಾಜು ಹಾಗೂ ಅಧ್ಯಕ್ಷರಾದ ಎಸ್ .ರಮೇಶ್ ರವರು ಮಾತನಾಡುತ್ತಾ ಈ ಬಾರಿ ಪ್ರದೀಪ್ ಈಶ್ವರ್ ರವರು ಕ್ಷೇತ್ರದ ಎಲ್ಲಾ ಸಮುದಾಯದ ಬೆಂಬಲದೊಂದಿಗೆ ಖಂಡಿತವಾಗಿ ಬಹುಮತದಿಂದ ವಿಜಯಗೊಳಿಸಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರರಿಗೆ ಸ್ವಯಂ ಪ್ರೇರಣೆಯಿಂದ ಚಿಕ್ಕಬಳ್ಳಾಪುರ ಪಟ್ಟಣ ಸೇರಿದಂತೆ ಎಲ್ಲ ಗ್ರಾಮದಲ್ಲೂ ಅಭೂತಪೂರ್ವ ಜನಸ್ತೋಮದೊಂದಿಗೆ ಬಿರುಸಿನ ಪ್ರಚಾರದಲ್ಲಿ ಭಾಗವಹಿಸಿರುವುದು ಕಂಡು ಬರುತ್ತದೆ.

ವಿಶೇಷವಾಗಿ ಕರ್ನಾಟಕ ಸಮೃದ್ಧಿ ಸಮಗ್ರ ಬಲಿಜ ವೇದಿಕೆಯ ಗೌರವಾಧ್ಯಕ್ಷರಾದ ಅಕ್ಕಿ ರಾಜು.ರಾಜ್ಯಾಧ್ಯಕ್ಷರಾದ ಎಸ್.ರಮೇಶ್. ಪ್ರಧಾನ ಕಾರ್ಯದರ್ಶಿ ವಿನಯ್ ನಾಯ್ಡು .ಸಂಘಟನೆ ಕಾರ್ಯದರ್ಶಿ ನಿರಂಜನ್ .ಹಾಗೂ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಕೂಡಿ ನಿರಂತರವಾಗಿ ಚಿಕ್ಕಬಳ್ಳಾಪುರದ ಸ್ಥಳೀಯ ಹಿರಿಯ ಬಲಿಜ ಮುಖಂಡರ ಮಾರ್ಗದರ್ಶನದಲ್ಲಿ ವಾರ್ಡ್ ಹಾಗೂ ಎಲ್ಲಾ ಹಳ್ಳಿ ಗ್ರಾಮ ಸ್ಥಳಗಳಲ್ಲಿ ಬಲಿಜ ಮತದಾರರ ಜಾಗೃತಿ ಅಭಿಯಾನವನ್ನು ಕೈಗೊಂಡು ಮತಯಾಚಿಸಿ ಪ್ರದೀಪ್ ಈಶ್ವರರ ಗೆಲುವಿಗಾಗಿ ಪಣ ತೊಟ್ಟಿದ್ದಾರೆ.