ತಿಪಟೂರು: ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೇಂದ್ರ ಸಂಸದೀಯ ಕಲ್ಲಿದ್ದಲು ಗಣಿ ಸಚಿವರಾದ ಪ್ರಹ್ಲಾದ ಜೋಶಿರವರ ವಿರುದ್ಧ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಸಿರುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಉತ್ತಮ ಬೆಳವಣಿಗೆಯಲ್ಲ.
ಶ್ರೀಗಳು ಹುಬ್ಬಳ್ಳಿ ಮೂರು ಸಾವಿರ ಮಠದ ವಿಚಾರ ನ್ಯಾಯಾಲಯದಲ್ಲಿದೆ ಇಂತಹ ಸಂದರ್ಭದಲ್ಲಿ ಹೇಳಿಕೆ ಸೂಕ್ತವಲ್ಲ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.ಮಠದ ಒಳಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಹ್ಲಾದ್ ಜೋಶಿ ರವರು ರಾಜ್ಯದ ಧಾರವಾಡ ಕ್ಷೇತ್ರದಿಂದ ಪ್ರತಿನಿಧಿಸಿ ಸತತವಾಗಿ 5ಬಾರಿ ಗೆದ್ದು ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಿ,
ದೇಶ ಕಂಡ ಅತ್ಯುತ್ತಮ ಸಚಿವರಾಗಿದ್ದಾರೆ ಅವರು ಯಾವುದೇ ಜಾತಿ ಮತ ಪಂಥಕ್ಕೆ ಸೀಮಿತವಾಗದೆ, ಉತ್ತಮ ಸಂಸದ ಪಟುವಾಗಿದ್ದಾರೆ, ದೇಶ, ಅಭಿವೃದ್ಧಿ, ಸಾಮರಸ್ಯ ವಿಚಾರದಲ್ಲಿ ಉತ್ತಮ ವ್ಯಕ್ತಿ ಆಯ್ಕೆ ಪ್ರಜೆಯ ಜವಾಬ್ದಾರಿಯಾಗಿರುತ್ತದೆ. ಈ ಸಂದರ್ಭದಲ್ಲಿ ದಿಂಗಾಲೇಶ್ವರ ಶ್ರೀಗಳ ತಾವು ಆಕಾಂಕ್ಷಿಯಂತೆ ಹೇಳಿಕೆ ಸಮಂಜಸವಲ್ಲ, ಬೇಕಿದ್ದರೆ ಬೇರೆ ಸ್ಥಳದಲ್ಲಿ ಗೋಷ್ಠಿ ನಡೆಸಿ ತಿಳಿಸಬಹುದಲ್ಲವೇ, ನ್ಯಾಯಾಲಯದಲ್ಲಿರುವ ಮೂರು ಸಾವಿರ ಮಠದಲ್ಲಿ ಏಕೆ ಗೋಷ್ಠಿ ನಡೆಸಬೇಕಿತ್ತು ಈ ವಿಚಾರವಾಗಿ ಹಿರಿಯ ಶ್ರೀಗಳಾದ ಗುರುಸಿದ್ಧ ರಾಜೇಂದ್ರ ಶಿವಯೋಗಿ ಸ್ವಾಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪ್ರಶ್ನಿಸಿದರು.