ದೇವನಹಳ್ಳಿ: ಪೆನ್ ಡ್ರೈವ್ ವಿಡಿಯೋಗಳನ್ನ ಕನಿಷ್ಟ ಬ್ಲರ್ ಮಾಡದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಟ್ಟ ಆರೋಪಿಗಳಾದ ಡಿಕೆಶಿ ಮತ್ತು ಶಿವರಾಮೇಗೌಡ ಮೇಲೂ ಕ್ರಮ ಜರುಗಿಸಬೇಕೆಂದು ರಾಜ್ಯಾದ್ಯಂತ ಜೆಡಿಎಸ್ ಕಾರ್ಯಕರ್ತರು ದೇವನಹಳ್ಳಿ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ತಪ್ಪು ಮಾಡಿದ್ರೆ ಪ್ರಜ್ವಲ್ ರೇವಣ್ಣ ಮೇಲೆ ಕಠಿಣ ಕ್ರಮವಾಗಲಿ ಹಾಗೆಯೇ ಈ ಕೇಸನ್ನು ಎಸ್ಐಟಿ ಬದಲಿಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ಹಲವು ದಿನಗಳಿಂದ ರಾಜ್ಯದಲ್ಲಿ ಎಡಬಿಡದೆ ಪ್ರ ಜ್ವಲ್ ರೇವಣ್ಣ ಪೆನ್ ಡ್ರೈವ್ದೆ ಚರ್ಚೆಯಾಗ ತೊಡಗಿದೆ. ಅನಾವಶ್ಯಕವಾಗಿ ಹೆಣ್ಣುಮಕ್ಕಳ ಮಾನ ಹರಾಜಾಗಲೂ ಡಿಕೆಶಿ ಮತ್ತು ಶಿವರಾಮೇಗೌಡ ಕಾರಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ,ತಾಲೂಕು ಅಧ್ಯಕ್ಷ ಆರ್. ಮುನೇಗೌಡ, ರಾಜ್ಯ ಸಮಿತಿ ಸದಸ್ಯ ಬುದಿಗೆರೆ ಶ್ರೀನಾಥ್ ,ಪ್ರಧಾನ ಕಾರ್ಯದರ್ಶಿ ಜಿ .ಎ.ರವೀಂದ್ರ, ಮುಖಂಡರಾದ ಮನಗೊಂಡನಹಳ್ಳಿ ಜಗದೀಶ್ ,ಕಾಮೇನಹಳ್ಳಿ ರಮೇಶ್ ದೇವರಾಜ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.