ಬ್ಯಾಂಕಾಕ್ (ಪಿಟಿಐ): ಭಾರತದ ಬಿ.ಸಾಯಿ ಪ್ರಣೀತ್ ಅವರು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಅವರು 24-22, 7-21, 22-20 ರಲ್ಲಿ ಕೊರಿಯಾದ ಜೊನ್ ಹ್ಯೊಕ್ ಜಿನ್ ವಿರುದ್ಧ ಗೆದ್ದರು.
ಈ ಜಿದ್ದಾಜಿದ್ದಿನ ಹೋರಾಟ ಒಂದು ಗಂಟೆ 18 ನಿಮಿಷ ನಡೆಯಿತು.
ಕಣದಲ್ಲಿರುವ ಭಾರತದ ಇತರ ಎಲ್ಲ ಸ್ಪರ್ಧಿಗಳೂ 16ರ ಘಟ್ಟದಲ್ಲಿ ಎಡವಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿರಣ್ ಜಾರ್ಜ್ 22-20, 15-21, 20-22 ರಲ್ಲಿ ಹಾಂಗ್‌ಕಾಂಗ್‌ನ ಯಿಯು ಲೀ
ಚುಕ್ ಎದುರು ಸೋತರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಶ್ಮಿತಾ ಚಲಿಹಾ 21-19, 13-21, 27-29 ರಲ್ಲಿ ಡೆನ್ಮಾರ್ಕ್‌ನ ಲಿನ್ ಹೊಯೆಮಾರ್ಕ್ ಕೈಯಲ್ಲಿ ಪರಾಭವಗೊಂಡರು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಇಶಾನ್ ಭಟ್ನಾಗರ್- ಕೆ.ಸಾಯಿ ಪ್ರತೀಕ್ ಜೋಡಿ 14-21, 21-18, 26-24 ರಲ್ಲಿ ಪುನ್ಪನಿಚ್ ತನದೊನ್- ಸೊತೊನ್ ವಚಿರವಿತ್ ಎದುರು ಸೋತಿತು.
Leave a Review