ಬೆಂಗಳೂರು: ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆದ ಬೆರಗುಗೊಳಿಸುವ ಸೌಂದರ್ಯ ಸ್ಪರ್ಧೆಯಲ್ಲಿ ಪ್ರತೀಕ್ ಜಂಗಡ ಅವರು ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2024 ಕಿರೀಟವನ್ನು ಅಲಂಕರಿಸಿದರು. ಗೇ ಸಮುದಾಯಕ್ಕಾಗಿಯೇ ಆಯೋಜಿಸಲಾದ ಅತ್ಯಂತ ಗಮನ ಸೆಳೆಯುವ, ವರ್ಣರಂಜಿತ ಸ್ಪರ್ಧೆಯಲ್ಲಿ ಪ್ರತೀಕ್ ಜಂಗಡ ಇತಿಹಾಸ ಬರೆದಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಯು ಜಂಗಡ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲದೇ ಗೇ ಸಮುದಾಯದಲ್ಲಿ ಮಹತ್ವದ ಹೆಜ್ಜೆಯನ್ನೂ ಸೂಚಿಸುತ್ತದೆ. ಭಾರತೀಯ ಸಮಾಜದಲ್ಲಿ ಸ್ವೀಕಾರ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವಲ್ಲಿ ಈ ಸ್ಪರ್ಧೆ ಮಹತ್ವ ಪಡೆದುಕೊಂಡಿದೆ.ಜಂಗಡಾ ಜೊತೆಗೆ, ಆಶಿಶ್ ಚೋಪ್ರಾ ಮೊದಲ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡರೆ, ಫಿರ್ದೌಸ್ ಎಂದು ಕರೆಯಲ್ಪಡುವ ಮಯೂರ್ ರಜಪೂತ್ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಅವರ ಗಮನಾರ್ಹ ಸಾಧನೆಗಳು ಭಾರತದಲ್ಲಿ ಎಲ್.ಜಿ.ಬಿ.ಟಿ.ಕ್ಯೂ ಪ್ಲಸ್ – ಐಉಃಖಿಕಿ+ ಸಮುದಾಯದ ಒಳಗೊಳ್ಳುವಿಕೆ ಮತ್ತು ಪ್ರಾತಿನಿಧ್ಯದ ಹೊಸ ಯುಗದ ಸಂಕೇತವಾಗಿದೆ.
ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ ತಂಡದಿಂದ ಆಯೋಜಿಸಲಾದ ಸೌಂದರ್ಯ ಸ್ಪರ್ಧೆಯಲ್ಲಿ ಸಮರ್ಥನೆ, ಸಬಲೀಕರಣ ಮತ್ತು ಆಚರಣೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಸ್ಪರ್ಧೆಯು ಬಾಹ್ಯ ಸೌಂದರ್ಯವನ್ನು ಮಾತ್ರವಲ್ಲದೆ, ಸಮಾಜದೊಳಗೆ ಧನಾತ್ಮಕ ಬದಲಾವಣೆಯನ್ನು ಉಂಟುಮಾಡಲು ಭಾಗವಹಿಸುವವರ ಆಂತರಿಕ ಶಕ್ತಿ ಮತ್ತು ಬದ್ಧತೆಯನ್ನು ಸಹ ಪ್ರದರ್ಶಿಸಿತು.
ಪ್ರಶಸ್ತಿ ಮುಡಿಗೇರಿಸಿಕೊಂಡ ನಂತರ ಮಾತನಾಡಿದ ಪ್ರತೀಕ್ ಜಂಗಡ ಅವರು ಐಉಃಖಿಕಿ+ ವ್ಯಕ್ತಿಗಳ ವೈವಿಧ್ಯಮಯ ಕ್ಷೇತ್ರವನ್ನು ಪ್ರತಿನಿಧಿಸಲು ಹೆಮ್ಮೆಯಾಗುತ್ತಿದೆ. ವೈವಿಧ್ಯತೆಯನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿರುವ ನನಗೆ ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ ಎಂಬ ಬಿರುದು ಸಿಕ್ಕಿರುವುದು ಗೌರವ ತಂದಿದೆ. “ಈ ಗೆಲುವು ನಮ್ಮ ಸಮಾಜದಲ್ಲಿ ಅಡೆತಡೆಗಳನ್ನು ಮುರಿಯಲು ಮತ್ತು ಸ್ವೀಕಾರವನ್ನು ಉತ್ತೇಜಿಸಲು ಸಾಕ್ಷಿಯಾಗಿದೆ. ಈ ಪ್ರಯಾಣ ಅದ್ಭುತವಾಗಿದೆ ಮತ್ತು ನಾನು ಅದನ್ನು ಬದುಕುತ್ತಿದ್ದೇನೆ.” ಎಂದರು.
ಮೊದಲ ರನ್ನರ್ ಅಪ್ ಆಶಿಶ್ ಚೋಪ್ರಾ ಮಾತನಾಡಿ, ಉತ್ತಮ ಅನುಭವಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಅಂತಿಮ ಹಂತಕ್ಕೆ ತಲುಪಿದವರೊಂದಿಗೆ ಪ್ರತಿ ನಿಮಿಷವನ್ನು ಆನಂದಿಸಿದೆ ಮತ್ತು ಪ್ರತಿಯೊಬ್ಬರಿಂದ ತುಂಬಾ ಕಲಿತಿದ್ದೇನೆ. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಶ್ರಮಿಸುತ್ತೇನೆ ಮತ್ತು ಯಾರ ಧ್ವನಿಗಳು ಕೇಳಿಸುತ್ತಿಲ್ಲವೋ ಅವರಿಗೆ ಧ್ವನಿಯಾಗುತ್ತೇನೆ ಎಂದು ಹೇಳಿದರು.
ಎರಡನೇ ರನ್ನರ್-ಅಪ್ ಮಯೂರ್ ರಜಪೂತ್ ಮಾತನಾಡಿ, ಐಉಃಖಿಕಿ+ ಸಮುದಾಯಕ್ಕಾಗಿ ವಿಶೇಷವಾಗಿ ಮಾನಸಿಕ ಆರೋಗ್ಯದ ಅರಿವಿನ ಮೇಲೆ ಕೇಂದ್ರೀಕರಿಸುವ ಮೂಲಕ ತಮ್ಮ ಪ್ರಯಾಣದ ಮಹತ್ವವನ್ನು ಒತ್ತಿ ಹೇಳಿದರು. “ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2024 ರಲ್ಲಿ ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ವಿನಮ್ರ ಮತ್ತು ಗೌರವವಿದೆ” ಎಂದರು.ಮಿಸ್ಟರ್ ಗೇ ವರ್ಲ್ಡ್ನ ಏಷ್ಯಾದ ನಿರ್ದೇಶಕ ಶ್ರೀರಾಮ್ ಶ್ರೀಧರ್ ಅವರು ಮಿಸ್ಟರ್ ಗೇ ವರ್ಲ್ಡ್ ಇಂಡಿಯಾದಂತಹ ಸೌಂದರ್ಯ ಸ್ಪರ್ಧೆಗಳ ಆಂತರಿಕ ಸೌಂದರ್ಯವನ್ನು ಆಚರಿಸುವ ಮತ್ತು ಸಾಮಾಜಿಕ ಬದಲಾವಣೆಯನ್ನು ಉತ್ತೇಜಿಸುವ ಪರಿವರ್ತಕ ಶಕ್ತಿಯಾಗಿದೆ ಎಂದರು.