ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದ ಮಸ್ಜಿದ್ -ಎ- ಖಮರ್ ನ ಸಭಾಂಗಣದಲ್ಲಿ ಜಮಿಯತ್ ಉಲೇಮಾ ಹಿಂದ್ ಸಂಘಟನೆಯ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುವುದರ ಮೂಲಕ ಅವರಿಗೆ ಶೈಕ್ಷಣಿಕವಾಗಿ ಪ್ರೊ ತ್ಸಾಹಿಸಲಾಯಿತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಮಾಜಿ ಪುರಸಭಾ ಸದಸ್ಯ ಡಾ.ಮಹಮ್ಮದ್ ನೂರ್ ಉಲ್ಲಾ ಶೈಕ್ಷಣಿಕವಾಗಿ, ಸಾಮಾಜಿಕ ವಾಗಿ ಹಾಗೂ ಆರ್ಥಿಕವಾಗಿ ಅಲ್ಪಸಂಖ್ಯಾತ ಸಮುದಾಯವು ಪ್ರಗತಿಯನ್ನು ಸಾಧಿಸಬೇಕು ಮತ್ತುಇನ್ನಿತರ ಸಮುದಾಯಗಳೊಂದಿಗೆ ಮುಖ್ಯವಾಹಿನಿಗೆ
ಬರಬೇಕೆಂದು ಕರೆ ನೀಡಿದರು.
ಪೋಷಕರು ತಮ್ಮಹೆಣ್ಣುಮಕ್ಕಳನ್ನು ಹದಿಹರೆಯ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿ ಅವರ ಶೈಕ್ಷಣಿಕ ಭವಿಷ್ಯವನ್ನು ಅಂಧಕಾರದ ಕೂಪಕ್ಕೆ ತಳ್ಳಬಾರದೆಂದರು.ವಿದ್ಯಾರ್ಥಿಗಳು ಕಠಿಣ ಪರಿಶ್ರಮ ದೊಂದಿಗೆ ವಿದ್ಯಾಭ್ಯಾಸವನ್ನು ಮುಂದು ವರೆಸಿದಲ್ಲಿ ಅವರ ಭಾವೀ ಜೀವನವು ಕಷ್ಟ ಕಾರ್ಪಣ್ಯಗಳಿಂದ ಹೊರತಾಗಿ ಸುಂದರ ರೂಪವನ್ನು ಪಡೆದುಕೊಳ್ಳುತ್ತದೆ ಹಾಗೂಜೀವನದ ಗುಣಮಟ್ಟ ದಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ.ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ,ಪರಿಶ್ರಮ ಮತ್ತು ಧ್ಯೇಯದ ಮೂಲಕ ಅದನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದರು.
ಪೋಷಕರು ತಮ್ಮಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಅವರ ಭವಿಷ್ಯವನ್ನು ನಾಶ ಮಾಡದೇ ಶೈಕ್ಷಣಿಕವಾಗಿ ಮುಂದುವರೆಸಲು ಸಹಕರಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಅತ್ಯುನ್ನತ ಅಧಿಕಾರವನ್ನು ಪಡೆದು ಮುಂದುವರೆಯಬೇಕಾದ ಅನಿವಾರ್ಯತೆ ಬಗ್ಗೆ ಅರಿವು ಮೂಡಿಸಿದರು.ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರು ಬೆಳೆದುಬಂದ ಹಾದಿ ಮತ್ತು ಆದರ್ಶಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಗೂಳೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಸತ್ಯನಾರಾಯಣ ರಾವ್ ಮಾತನಾಡಿ ಪೋಷಕರು ಮಕ್ಕಳ ಬಗ್ಗೆ ಸರಿಯಾದ ಕಾಳಜಿ ವಹಿಸಿ ಶಿಕ್ಷಣವನ್ನು ಕೊಡಿಸಿದಲ್ಲಿ ಅವರ ಭವಿಷ್ಯ ಉತ್ತಮವಾಗುವುದೆಂದರು.ವಿದ್ಯಾರ್ಥಿಗಳು ತಮ್ಮಲ್ಲಿ ಸ್ಪರ್ಧಾ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ತಾಲ್ಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ ಮಾತನಾಡಿ ಈ ರೀತಿಯ ಪ್ರತಿಭಾ ಪ್ರೋತ್ಸಾಹದ ಕಾರ್ಯಕ್ರಮ ಶ್ಲಾಘನೀಯ ಹಾಗೂ ಅದರಲ್ಲೂ ಧರ್ಮಾತೀತವಾಗಿ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಫಾರೂಕ್ ಮಸೀದಿಯ ಧರ್ಮಗುರು ಮೌಲಾನಾ ರಿಯಾಜ್ಉದ್ದೀನ್ ರವರು ಸಂದೇಶವನ್ನು ನೀಡುತ್ತಾ ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಖುರಾನ್ ನ ಮೊದಲ ಶ್ಲೋಕ ವೇ ಶಿಕ್ಷನವನ್ನು ಪಡೆಯುವ ಬಗ್ಗೆ ಇದೆ.ಶಿಕ್ಷಣದ ಮೂಲಕವೇ ನಾವು ಪ್ರಗತಿಯನ್ನು ಹೊಂದಲು ಸಾಧ್ಯವೆಂದರು.
ಶಿಕ್ಷಣದ ಮೂಲಕ ನಾವು ಅನೇಕ ಜ್ವಲಂತ ಸಮಸ್ಯೆಗಳಿಂದ ಪಾರಾಗಬಹುದೆಂದರು. ಈ ಸಂಧರ್ಭದಲ್ಲಿ ಮುಖಂಡರಾದ ಜಮಿಯತ್ ನ ತಾಲ್ಲೂಕು ಅಧ್ಯಕ್ಷ ಹಾಫೀಜ್ ರಿಜ್ವಾನ್, ಕಾರ್ಯದರ್ಶಿ ಆದಿಲ್ ಖಾನ್, ಭಾರತ್ ಪ್ರಿಂಟರ್ಸ್ ನ ಮಾಲೀಕ ಅಬ್ದುಲ್ ಕರೀಂ ಸಾಬ್, ಶಿಕ್ಷಕ ಕಲೀಮುಲ್ಲ, ನಿವೃತ್ತಿ ಶಿಕ್ಷಕರಾದ ಮುನೀರ್ ಅಹ್ಮದ್, ಆಸಿಫ್, ಜಬೀ ಉಲ್ಲಾ, ಮುಸ್ತಫಾ, ಹಾಫೀಜ್ ಕಲೀಮ್ ಉಲ್ಲಾ ಮತ್ತು ಇತರರು ಉಪಸ್ಥಿತರಿದ್ದರು.