This is the title of the web page
This is the title of the web page

ಏಷ್ಯಾ ಕಪ್ ಜೂನಿಯರ್ ಹಾಕಿ: ಭಾರತ ತಂಡಕ್ಕೆ ಪ್ರೀತಿ ನಾಯಕಿ

ನವದೆಹಲಿ: ಪ್ರತಿಭಾವಂತ ಡಿಫೆಂಡರ್ ಪ್ರೀತಿ ಅವರನ್ನು ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಫಾರ್ವರ್ಡ್ ಆಟಗಾರ್ತಿ ದೀಪಿಕಾ ಉಪನಾಯಕಿಯಾಗಿದ್ದಾರೆ.

ಬುಧವಾರ ಹಾಕಿ ಇಂಡಿಯಾ ಪ್ರಕಟಿಸಿದ ತಂಡದಲ್ಲಿ ಒಟ್ಟು 18 ಆಟಗಾರ್ತಿಯರು ಸ್ಥಾನ ಗಳಿಸಿದ್ದಾರೆ.