This is the title of the web page
This is the title of the web page

`ಪ್ರೀತಿ ಪ್ರಗಾಥ’ ಶೀರ್ಷಿಕೆ ಅನಾವರಣ

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಜನಪ್ರಿಯ ಕವಿ ಡಾ.ದೊಡ್ಡರಂಗೇಗೌಡರ “ ಪ್ರೀತಿ ಪ್ರಗಾಥ” ಎಂಬ ಕಾವ್ಯ ಚಲನಚಿತ್ರವಾಗುತ್ತಿದೆ.

ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡ ನವಿಲುಗರಿ ನವೀನ್ ಪಿ ಬಿ ನಿರ್ದೇಶಕರಾದರೆ ಖ್ಯಾತ ಸಾಹಿತಿ ಡಾ.ಭದ್ರಾವತಿ ರಾಮಾಚಾರಿಯವರು ಚಿತ್ರ ಕಥೆ, ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಇಂದೂ ವಿಶ್ವನಾಥ್ ಅವರ ಸಂಗೀತ ಸಂಯೋಜನೆ ಡಾ.ದೊಡ್ಡರಂಗೇಗೌಡರೇ ಗೀತೆಗಳನ್ನು ರಚಿಸಿದ್ದಾರೆ. ವಿಭಿನ್ನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರದ ನಾಯಕನ ಪಾತ್ರದಲ್ಲಿ ಅನಿಕ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದ್ದು ಇತ್ತೀಚೆಗೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಓಂ ಸಾಯಿಪ್ರಕಾಶ್ ರವರು ಈ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಪ್ರದೀಪ್, ಹರ್ಷ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಸಿದ್ದತೆಯಲ್ಲಿದ್ದು ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.