ಬೆಂಗಳೂರು: ಆಟೋರಿಕ್ಷಾ ಚಾಲಕರು ಕರದಲ್ಲಿಗೆ ಬರವಲ್ಲಿ ನಿರಾಕರಿಸುವುದನ್ನು ಮತ್ತು ದುಪ್ಪಟ್ಟು ಹಣವನ್ನು ಕೇಳುವ ದೂರುಗಳು ಸುಮಾರು ಬಂದ ಹಿನ್ನೆಲೆಯಲ್ಲಿ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವತಿಯಿಂದ ಪ್ರಿಪೇಯ್ಡ್ ಆಟೋ ನಿಲ್ದಾಣವನ್ನು ನಿಮಾನ್ಸ್ ಮುಂಭಾಗ ಇಂದು ಉದ್ಘಾಟನೆಗೊಂಡಿದೆ.
ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಸಂಜಯ್ ಗಾಂಧಿ ಅಪಘಾತ ಮತ್ತು ಚಿಕಿತ್ಸಾ ಆಸ್ಪತ್ರೆ, ನಿಮಾನ್ಸ್ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ನೂತನ ಪ್ರಿಪೇಯ್ಡ್ ಆಟೋ ನಿಲ್ದಾಣವನ್ನು ಇಂದು ಜಂಟಿ ಪೊಲೀಸ್ ಆಯುಕ್ತ ಅನುಚೇತ ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಅನುಚೇತ ರವರು ಸಾರ್ವಜನಿಕರು ಭಯಪಡದೆ ದೂರುಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಸಬಹುದು ಎಂದು ತಿಳಿಸ ಬಹುದು ಎಂದು ಹೇಳಿದ್ದಾರೆ.